ಶಿಕ್ಷಕರಿಗಿಂತ ದೊಡ್ಡವರಿಲ್ಲ: ಸಿದ್ರಾಮೇಶ್ವರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ಶಿಕ್ಷಕರಿಗಿಂತ ದೊಡ್ಡವರು ಮತ್ಯಾರು ಇಲ್ಲ ಎಂದು ಗಾಂಧಿನಗರ ಠಾಣೆಯ ಇನ್ಸಫೆಕ್ಟರ್ ಸಿದ್ರಾಮೇಶ್ವರ ಗಡೇದ ಅಭಿಪ್ರಾಯ ಪಟ್ಟರು
ಅವರು ನಿನ್ನೆ ಸಂಜೆ ನಗರದ ಮೇಘಾ ಕೋಚಿಂಗ್ ಸೆಂಟರ್ ಅಗಡಿ‌ ಮಾರೆಪ್ಪ ಕಾಂಪೌಂಡ್ ನಲ್ಲಿ  ಹಮ್ಮಿಕೊಂಡಿ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ನನಗೆ ಇಂಜಿನೀಯರ್ ಆಗಬೇಕೆಂಬ ಆಸೆ ಇತ್ತು ಆದರೆ 14 ಸಾವಿರ ರೂ ಫೀ ಕಟ್ಟಲು ಇಲ್ಲದೆ ಟಿಸಿಹೆಚ್ ಮಾಡಿಕೊಂಡು ನಾನು ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ್ದೇನೆ. ಎಂಟನೂರು ಸಂಬಳದಲ್ಲಿ ಸೇವೆ ಮಾಡುತ್ತಿದ್ದೆ. ಅದು ಕೇವಲ ಸೇವೆಗೆಂದು ಮಾಡಿದೆ. ಇಂದು ದಿನಕ್ಕೆ 3 ಸಾವಿರ ದಂಬಲಕ ತೆಗೆದುಕೊಳ್ಳುವ ವೃತ್ತಿ‌ಪಡೆದಿರುವೆ ಇದಕ್ಕೆ ಶ್ರದ್ದೆ ಮುಖ್ಯ ಎಂದರು.
ಅಂಬೇಡ್ಕರ್ ಹೇಳಿದಂತೆ ಶಿಕ್ಷಣದಿಂದಲೇ ಕ್ರಾಂತಿ. ಲಿಂಗಸೂಗೂರು ತಾಲೂಕಿನ ಆಶಾಳ್ ತಾಂಡದಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಇಡೀ ಗ್ರಾಮದ ಎಲ್ಲಾ ಮನೆಯಲ್ಲಿ ಸರ್ಕಾರಿ ನೌಕರಿದ್ದಾರೆ. ಅದಕ್ಕಾಗಿ‌ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಅವರನ್ನೇ ಆಸ್ತಿ ಮಾಡಿ ಎಂದರು.‌
ಮೇಘಾ ಕೋಚಿಂಗ್ ಸೆಂಟರ್ ನ  ಮುಖ್ಯಸ್ಥ ಮಹೇಶ್ ಮಾತನಾಡಿ ಬಡತನದಿಂದ ಇತರರ ಸಹಕಾರದಿಂದ ವಿಧ್ಯೆ ಪಡೆದು ಶಿಕ್ಷಕನಾಗಿರುವ ನಾನುಇನ್ನು ಮುಂದೆ ಪ್ರತಿ ವರ್ಷ ನನಗೆ ಬಮನದಿರುವ ಆದಾಯದಲ್ಲಿ ಶೇ 10 ರಷ್ಟನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಿದೆಂದು ಪ್ರಕಟಿಸಿದರು. ಸಮಾರಂಭದಲ್ಲಿ ಖಾಸಗಿ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯ್ತು.
ಪಾಲಿಕೆ ಸದಸ್ಯ ನೂರ್ ಮಹಮ್ಮದ್, ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ.  ಹೊಟೇಲ್ ಉದ್ಯಮಿ ಪೋಲಾ ರಾಧಕೃಷ್ಣ,  ಹಿರಿಯ ಲೆಕ್ಕ ಪರಿಶೋಧಕ ಜಯಪ್ರಕಾಶ್ ಜೆ.ಗುಪ್ತ, ಹಿರಿಯ ಪತ್ರಕರ್ತೆನ್.ವೀರಭದ್ರಗೌಡ,  ನಿಮಗಾಗಿ ನಾವು ಸಂಸ್ಥೆಯ ವಿನಯ್,  ನೃತ್ಯ ಕಲಾವಿದ ಸುಂಕಣ್ಣ, ಸಮಾಜ ಸೇವಕ ಬಿಸಲಳ್ಳಿ ಬಸವರಾಜ್, ಬಿ.ಆರ್.ಎಲ್.ಸೀನಾ,  ಮೊದಲಾದವರು ಇದ್ದರು.