ಚನ್ನವೀರ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ
ಕಲಬುರಗಿ:ಸೆ.6:ಸಹಸ್ರಾರು ಭಕ್ತ ಸಮೂಹದ ಜಯ ಘೋಷಣೆಗಳ ನಡುವೆ ಲಿಂಗೈಕ್ಯ ಶ್ರೀ ಗುರು ಚನ್ನವೀರ ಶಿವಯೋಗಿಗಳ ನೂತನ ಮೂರ್ತಿ ಪ್ರತಿಪ್ಠಾಪನೆ ಗುರುವಾರ ಬೆಳಗ್ಗೆ ಭವಾನಿನಗರದ ಶ್ರೀ ಗುರು ಚನ್ನವೀರೇಶ್ವರ ವಿರಕ್ತಮಠದಲ್ಲಿ ಅದ್ದೂರಿಯಾಗಿ ನಡೆಯಿತು.
ಮಠದ ಪೀಠಾಪತಿ ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಹಾಗೂ ಚಾಂಗಲೇರಾದ ಶ್ರೀ ಗುರುಲಿಂಗ ಶಿವಾಚಾರ್ಯರ ಅಮೃತ ಹಸ್ತದಿಂದ ಧಾರ್ಮಿಕ ವಿ ವಿಧಾನದ ಮೂಲಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದರು.
ನಂತರ ಮಾತನಾಡಿದ ಚಾಂಗಲೇರಾ ಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಬಬಲಾದಿ ಮಠದ ಭಕ್ತರು ಧಾರ್ಮಿಕ ಕಾರ್ಯಕ್ರಮ ನಡೆಸಿ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಿz್ದÁರೆ. ಸಮಾಜದಲ್ಲಿ ಸದಾ ಇಂತಹ ಕಾರ್ಯ ನೆರವೇರಬೇಕು’ ಎಂದು ಹೇಳಿದರು. ಎಲ್ಲಿ ಭಕ್ತಿ ಇರುತ್ತದೆ, ಅಲ್ಲಿ ದೇವರು ಇರುತ್ತಾನೆ. ದೇವರು ಎಂದ ಕ್ಷಣ ಮನುಷ್ಯನಲ್ಲಿ ಭಯ, ಭಕ್ತಿ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಶ್ರೀ ಚನ್ನವೀರ ಶಿವಯೋಗಿಗಳ ಮಾಡಿದಂತಹ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಪೂಜ್ಯ ಗುರುಪಾದಲಿಂಗ ಶಿವಯೋಗಿಗಳು ಸಹ ಪೂಜ್ಯರ ಹಾದಿಯ¯್ಲÉೀ ನಡೆಯುತ್ತಿz್ದÁರೆ ಎಂದು ತಿಳಿಸಿದರು.
ಶ್ರೀಗುರು ಚನ್ನವಿರೇಶ್ವರ ವೇದ ಜ್ಯೋತಿಷ್ಯ ಪಾಠಶಾಲೆಯಿಂದ ವೈದಿಕ ಕಾರ್ಯಕ್ರಮ ನಡೆಯಿತು.
** ಉಡಿ ತುಂಬುವ ಕಾರ್ಯಕ್ರಮ: ಭವಾನಿನಗರದ ಶ್ರೀ ಗುರು ಚನ್ನವೀರೇಶ್ವರ ವಿರಕ್ತಮಠದಲ್ಲಿ ಸುಮಾರು 1600ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಹಾಗೂ ಮುಗಳಖೋಡ,ಜಿಡಗಾ ಮಠದ ಪೀಠಾಪತಿ ಡಾ. ಮುರುಘರಾಜೇಂದ್ರ ಶಿವಯೋಗಿಗಳು ಎಲ್ಲ ಮುತೈದ್ಯೆಯರಿಗೆ ಆಶೀರ್ವದಿಸಿದರು. ಒಂದೇ ಸ್ಥಳದಲ್ಲಿ ಇಷ್ಟು ಸಂಖ್ಯೆಯ ಮಹಿಳೆಯರಿಗೆ ಉಡಿ ತುಂಬುವಂಥ ಕಾರ್ಯಕ್ರಮ ವೀಕ್ಷಿಸುವುದಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಹೋಳಿಗೆ, ತುಪ್ಪ, ಹೂರಣಗಡುಬು, ಹುಗ್ಗಿ ಅನ್ನ,ಸಾರು ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಸಂಜೆ ಪೂಜ್ಯ ಶ್ರೀ ಗುರಪಾದಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ, ಕುರಕೋಟಾ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ, ಯಳಸಂಗಿ ಸಿದ್ಧಾರೂಡ ಮಠದ ಪರಮಾನಂದ ಸ್ವಾಮೀಜಿ, ಸಾಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದರು. ಮಠದ ಭಕ್ತರಾದ ಅಣ್ಣಾರಾವ ಎಸ್. ಪಾಟೀಲ್ ಅವರಿಂದ ಪೂಜ್ಯರ ತುಲಾಭಾರ ನೆರವೇರಿತು. ಪುರಾಣಿಕರಾದ ಮಡಿವಾಳಯ್ಯ ಶಾಸ್ತ್ರಿ, ಸಂಗೀತಗಾರರಾದ ಯಶ್ವಂತ ಬಡಿಗೇರ, ತಬಲಾವಾದಕರಾದ ರಾಜಶೇಖರ ಕಟ್ಟಿಸಂಗಾವಿ ಸೇರಿ ಮಠದ ಸದ್ಭಕ್ತ ಮಂಡಳಿಯವರು ಹಾಗೂ ಭಕ್ತರು ಇದ್ದರು.