ನಾಳೆ ಬೀದರ್ ಮುಕ್ತಿಧಾಮದಲ್ಲಿ ತಮಲೂರು ಶ್ರೀಗಳ ಜನ್ಮ ದಿನೋತ್ಸವ
ಬೀದರ್: ಸೆ.6:ನಾಳೆ ಬೆಳಿಗ್ಗೆ 10 ಗಂಟೆಗೆ ತಮಲೂರು ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರ 57ನೇ ಜನ್ಮ ದಿನೋತ್ಸವ ಬೀದರ್ ನಗರದ ಪ್ರತಾಪನಗರ ಬಡಾವಣೆಯಲ್ಲಿರುವ ಮುಕ್ತಿ ಧಾಮದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಸ್ಥಳಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸೇರಿದಂತೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಹಾಗೂ ವಿವಿಧ ಮಠಾಧೀಶರ ಸನ್ನಧಾನದಲ್ಲಿ ತಮಲೂರು ಶ್ರೀಗಳ ಸದಸ್ಭಕ್ತರಿಂದ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ.
ಶ್ರೀಗಳ ಜನ್ಮದಿನದ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು, ರುದ್ರಾಭಿಷಕ, ಭಜನೆ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲಲಾಗುತ್ತಿದೆ.
ಕಾರಣ ಶ್ರೀಗಳ ಸದ್ಭಕ್ತರು ಜನ್ಮದಿನೋತ್ಸವ ಸಂದರ್ಭದಲ್ಲಿ ಪಾಲ್ಗೊಂಡು ಶ್ರೀಗಳ ಆಶಿರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀಗಳ ಸದ್ಭಕ್ತರು ಹಾಗೂ ಜನ್ಮದಿನೋತ್ಸವ ಆಯೋಜಕರಲ್ಲೊಬ್ಬರಾದ ಪ್ರಕಾಶ ಮಾಳಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.