ಅಯೋಧ್ಯೆಯ ದರ್ಶನ ಮಾಡಿಸಲಿರುವಸರ್ವಸಿದ್ದಿ ವಿನಾಯಕ ಮಿತ್ರಮಂಡಳಿಯ ಬಾಲರಾಮ ಗಣೇಶ
* 30 ಲಕ್ಷ ವೆಚ್ಚದಲ್ಲಿ ಸಿದ್ದತೆ
* 44×60 ವೇದಿಕೆ
* ರಾಮ ಮಂದಿರವೇ ಮಂಟಪ
* ರಜತ ಮಹೋತ್ಸವದ ಸಂಭ್ರಮ
* ಪ್ರಸಾದ ವಿತರಣೆ, ಅನ್ನಸಂತರ್ಪಣೆ
* 25 ಕಿಲೋ ಗಣೇಶನ ಲಡ್ಡು
* 5 ದಿನಗಳ ಪ್ರದರ್ಶನ
* ಎಂ.ಜಿ ಬಳಿ ಜನಾಕರ್ಷಣೆಯ ಸ್ವಾಗತ ಕಮಾನು
ಎನ್.ವೀರಭದ್ರಗೌಡ
ಬಳ್ಳಾರಿ, ಸೆ.06:  ಕೋವಿಡ್ ಕಾಲದಲ್ಲೂ ಸೇರಿದಂತೆ ಕಳೆದ 25 ವರ್ಷಗಳಿಂದ ವಿವಿಧ, ವಿಭಿನ್ನ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುತ್ತ ನಗರದಲ್ಲು ಎಂ.ಜಿ.ಗಣೇಶ ಎಂದು ಖ್ಯಾತಿ ಪಡೆದಿರುವ ಸರ್ವಸಿದ್ದಿ ವಿನಾಯಕ ಮಿತ್ರಮಂಡಳಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ ಈ ವೇಳೆ ಈ ಬಾರಿ ಅಯೋಧ್ಯೆಯ ದರ್ಶನ ವೆಂಬಂತೆ  ರಾಮಮಂದಿರ ಮಾದರಿ ಮತ್ತು ಅದರಲ್ಲಿ ಬಾಲರಾಮನ ಸ್ವರೂಪದ ಗಣೇಶನ ಮೂರ್ತಿ ಪ್ರತಿಷ್ಟಾಪನೆಗೆ ಮುಂದಾಗಿದ್ದಾರೆ.
ಮಿತ್ರ ಮಂಡಳಿಯ ಸ್ನೇಹಿತರೆಲ್ಲ ಈ ಬಾರಿಯ ಸಿದ್ದತೆಗಳ ಬಗ್ಗೆ ಮಾಹಿತಿ ನೀಡುತ್ತ. ನಗರದ ಸತ್ಯ ಆರ್ಟ್ಸ್ ನ 20 ಕಲಾವಿದರು ಕಳೆದ ಒಂದು ತಿಂಗಳಿಂದ ಮಂಟಪ ಮತ್ತು ಗಣೇಶನನ್ನು ಸಿದ್ದಪಡಿಸಿದ್ದಾರೆ. ವಿದ್ಯುತ್ ಅಲಂಕಾರ,  44×60 ಅಡಿ ವಿಸ್ತಾರ, 30 ಅಡಿ ಎತ್ತರದ ವೇದಿಕೆ ನಡುವೆ ರ್ಮಾಣದಲ್ಲಿ ಒಟ್ಟಾರೆ 50 ಜನ‌ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ವೆಚ್ಚ 30 ಲಕ್ಷ ಎಂದು ಅಂದಾಜಿಸಲಾಗಿದೆ.
ದರ್ಶನ:
ಐದು ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಇರುತ್ತದೆ. ಸೆ.11 ಕ್ಕೆ ವಿಸರ್ಜನೆ ಮಾಡಲಿದೆ. ನಂತರ ಸೆ 13 ರಂದು ಸಾರ್ವಜನಿಕವಾಗಿ ಅಂತಸಂತರ್ಪಣೆ ಮಾಡಲಿದೆ. ದಿನ ನಿತ್ಯವೂ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಇದೆ.
ಐದು ದಿನಗಳಲ್ಲಿ ಒಂದು ಲಕ್ಷ ಭಕ್ತಾಧಿಗಳು ದರ್ಶನಕ್ಕೆ ಬರುವ ಸಾಧ್ಯತೆ ಹಿನ್ನಲೆಯಲ್ಲಿ ಕ್ಯೂ ವ್ಯವಸ್ಥೆ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯೂ ಮಾಡಲಾಗಿದೆ. ಆದರೂ ಪೊಲೀಸ್ ವ್ಯವಸ್ಥೆ ಬೇಕಿದೆ.  ನಾಳೆ ಸಂಜೆಯಿಮನದ ರ್ಶನ ಪಡೆಯಬಹುದು.
25 ಕಿಲೋ ಲಡ್ಡು.
ಇನ್ನು ಗಣೇಶನ ಕೃಪಾಶಿರ್ವಾದದ 25 ಕಿಲೋ ಸಿಹಿ ಲಡ್ಡನ್ನು ಪ್ರತಿ ವರ್ಷದಂತೆ ಈ ವರ್ಷ ಸೆ.10 ರಂದು ಹರಾಜು ಮಾಡಲಿದೆ. ಇದನ್ನು ಪಡೆದವರ ಕುಟುಂಬಕ್ಕೆ ಉತ್ತಮ ಬೆಳವಣಿಗೆ ಆಗುತ್ತದೆಂಬ ನಂಬಿಕೆ.
ಇತಿಹಾಸ:
ಇಲ್ಲಿನ ಪಟೇಲ್ ನಗರದ ಎಂ.ಜಿ. ಗಣೇಶನನ್ನು ಶ್ರೀ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯನ್ನು  ವಿವಿಧ ಉಧ್ಯಮ, ಉದ್ಯೋಗ, ವ್ಯಾಪರದಲ್ಲಿ ತೊಡಗಿಸಿಕೊಂಡ ತರುಣರೆಲ್ಲ ಸೇರಿ.  ಮೊದಲ ಬಾರಿಗೆ 1999 ರಲ್ಲಿ  ರಚನೆ ಮಾಡಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಾಯ್ತು.
ಯಾರಿಂದಲೂ ಚಂದ ಎತ್ತದೆ. ತಾವು ದುಡಿದ ದುಡಿಮೆ ಹಣ ಮತ್ತು ಸ್ನೇಹಿತರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಆಕರ್ಷಕ ರೀತಿಯಲ್ಲಿ, ಗಣೇಶನನ್ನು ಕೂರಿಸುತ್ತ ಬಂದಿದೆ.  ಒಂದೊಂದು ಬಾರಿ ಒಂದೊಂದು ಸ್ವರೂಪದ ಗಣೇಶ ಮತ್ತು ಮಂಟಪ ರಚನೆ ಮಾಡುತ್ತ ಬಂದಿದೆ.
ಈ ಬಾರಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಮಾದರಿ ಮಾಡಲಾಗಿದೆ. ರಾಮಲಲ್ಲಾ ಗಣಪನ ಮೂರ್ತಿ ಕೂಡಿಸಲಾಗುತ್ತದೆ.  ಸರ್ವ ದರ್ಮೀಯರು, ಜಾತಿಯ ಜನರಿಗೆ ದರ್ಶನದ ಅವಕಾಶವಿದೆ. ಇದು ನಮ್ಮ ಭಾವಕ್ಯತೆಯ ಸಂಕೇತ ಎಂದು ಮಂಡಳಿಯ ಮುಖಂಡರು ಹೇಳಿದ್ದಾರೆ.
ಶ್ರೀ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯಲ್ಲಿ ಬುಡಾ ಮಾಜಿ ಅಧ್ಯಕ್ಷ ಮಾರುತಿ ಎಸ್ ಪ್ರಸಾದ್, ಮೇಯರ್ ಮುಲ್ಲಂಗಿ ನಂದೀಶ್,  ಜಿತೇಂದ್ರ ಪ್ರಸಾದ್, ಲಕ್ಷ್ಮಯ್ಯ, ಸುನೀಲ್, ಕುಮಾರ್, ಮಾರುತಿ ಪ್ರಸಾದ್‌, ಬೆಲ್ಲಂ ಕಿಶೋರ್, ಸುಬ್ಬಾರಾವ್‌, ರಾಘವ, ಮಧುಸೂದನ್ ಮಧುಸೂದನ್ ರೆಡ್ಡಿ, ನಾಗರಾಜ್, ಗೋಪಾಲರೆಡ್ಡಿ, ಕೃಷ್ಣ, ಶ್ರವಣ್ ರೆಡ್ಡಿ, ರಾಜೇಶ್, ಸತಿ, ಗೋಪಿನಾಥ್, ದೀಪಕ್, ಆದಿಶೇಷ, ಲಿಕ್ಕರ್ ವೇಣು, ಇನ್ನಿತರರಿದ್ದಾರೆ.