ಜಾಮೀನು ಅರ್ಜಿಗೆ ಸಹಿ ಹಾಕಿದ ದರ್ಶನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06:  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಕ್ಕೆ ಸಂಬಂಧಿಸಿ  ಜಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ. ಈ ಪ್ರಕರಣದಲ್ಲಿ ಬಂಧನವಾಗಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್   ಜಾಮೀನು ಪಡೆಯಲು ನಿನ್ನೆ ಅರ್ಜಿಗೆ ಸಹಿ ಹಾಕಿದ್ದಾನಂತೆ.
ಪತಿ ದರ್ಶನಗೆ ಜಾಮೀನು ತೆಗೆದುಕೊಳ್ಳಲು ಅವರ  ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗದೀಪ ಜೊತೆಯಲ್ಲಿ ಬೆಂಗಳೂರಿನ ನಾಲ್ವರು ವಕೀಲರ ತಂಡದೊಂದಿಗೆ ಆಗಮಿಸಿದ್ದರು.
ದರ್ಶನ್ ಭೇಟಿ ಜೊತೆಗೆ ಕೆಲ ಆಹಾರ ವಸ್ತುಗಳನ್ನು ನೀಡಿ ನಿನ್ನದ ಸಂಜೆ ಅರ್ಧ ತಾಸು ಮಾತನಾಡಿದರು. ನಂತರ
ಜಾಮೀನು ಅರ್ಜಿಯಲ್ಲಿ ದರ್ಶನ್ ಸಹಿ ಪಡೆದರಂತೆ.
ವಿಜಯಲಕ್ಷ್ಮಿ ಬಂದು ಹೋದ ಬಳಿಕ ನಿಯಮಗಳ ಪ್ರಕಾರ ನೋಟರಿ ಮೂಲಕ ಜಾಮೀನು ಅರ್ಜಿಗೆ ಸಹಿ ಮತ್ತು ಸೀಲ್ ಹಾಕಿಸಿಕೊಳ್ಳಲಾಗಿದೆ.
ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ ಸಾಕ್ಷಿಗಳ ಮಾಹಿತಿ ಪಡೆಯಲಾಗಿದೆ.
ಇದರ ಜೊತೆಗೆ ದರ್ಶನ್ ನಟ ಸೆಲೆಬ್ರಿಟಿ. ಜಾಮೀನು ಸಿಕ್ಕ ಬಳಿಕ ಎಲ್ಲಿ ಹೋಗಲ್ಲ. ಜನರ ಮಧ್ಯೆಯೇ ಇರೋ ಹಿನ್ನೆಲೆ ಕೋರ್ಟ್  ಮತ್ತು ಪೊಲೀಸರು ಕರೆದಾಗ ವಿಚಾರಣೆಗೆ ಬರುತ್ತಾರೆ. ಹೀಗಾಗಿ ಜಾಮೀನು ನೀಡಿ ಎನ್ನುವ ವಿಷಯ ಮುಂದಿಟ್ಟುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರಂತೆ.
ದರ್ಶನ್ ಗೆ ಟಿವಿ ಭಾಗ್ಯ:
ಬಳ್ಳಾರಿ ಜೈಲಿನ ವಿಶೇಷ ಭದ್ರಾತಾ ಸೆಲ್ ನಲ್ಲಿರುವ ನಟ ದರ್ಶನ್ ಅವರಿಗೆ ಇಂದು ಹೈಯರ್ ಕಂಪನಿಯ 32 ಇಂಚಿನ ಹಳೇ ಟಿವಿಯನ್ನು ಜೈಲು ಅಧಿಕಾರಿಗಳು ನೀಡಲು ಸಿದ್ದತೆ ನಡೆಸಿದ್ದಾರಂತೆ.  ಜೊತೆಗೆ ಸೆಟ್ ಟಾಪ್ ಬಾಕ್ಸ್ ಸಂಪರ್ಕ ಸಹ ಒದಗಿಸಲುದ್ದಾರಂತೆ