ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಲುಶಾಮನೂರು ನಾಮಪತ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ  ಅಧ್ಯಕ್ಷ ಸ್ಥಾನವನ್ನು ಮತ್ತೆ ಬಯಸಿ.   ಕಾಂಗ್ರೆಸ್‌ಪಕ್ಷದ  ಹಿರಿಯ ಮುಖಂಡರೂ ಆಗಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಮಹಾಸಭೆಗೆ ನಡೆಯುವ ಚುನಾವಣೆಗೆ ನಿನ್ನೆ  ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ‌ ಮಹಾಸಭೆಯ ಕೇಂದ್ರ ಕಚೇರಿಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಮುಖ್ಯ ಚುನಾವಣಾಧಿಕಾರಿ ಎಂ.ಬಿ.ದ್ಯಾಬೇರಿ ಅವರಿಗೆ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೆ.11 ಕೊನೆಯ ದಿನವಾಗಿದೆ. 12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು 15 ಕೊನೆಯ ದಿನವಾಗಿದೆ. ಅಗತ್ಯವಿದ್ದಲ್ಲಿ ಸೆ.29 ರಂದು ಚುನಾವಣೆ ನಡೆಯಲಿದೆ.
ಇವರೊಬ್ಬರೇ ಸ್ಪರ್ಧೆ ಮಾಡಿದರೆ ಅವಿರೋದ ಆಯ್ಕೆಯಾಗಲಿದೆ. ಯಾರಾದರೂ ನಾಮ ಪತ್ರ ಸಲ್ಲಿಸದರೆ  ಚುನಾವಣೆ ನಡೆಸಬೇಕಾಗುತ್ತದೆ. ಆ ಸಾಧ್ಯತೆ ಕಡಿಮೆ ಇದೆ.