ರೈತರು ಕೃಷಿ ಜೊತೆಗೆ ಹೈನುಗಾರಿಕೆ ಆರಂಬಿಸಿ : ಚಿದಾನಂದ ಸವದಿ
ಅಥಣಿ :ಸೆ.6: ಕೃಷಿ ಮತ್ತು ಹೈನುಗಾರಿಕೆ ರೈತರಿಗೆ ಅನುಕೂಲವಾಗುವಂತಹ ಉದ್ಯೊಗಗಳಾಗಿದ್ದು, ರೆ?ತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಾರಂಭಿಸಿ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು
ಅವರು ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ನೂತನ ಹಾಲಿನ ಡೈರಿ ಉದ್ಘಾಟಿಸಿ ಮಾತನಾಡಿದರು
ರೈತರು ಕೇವಲ ವ್ಯವಸಾಯ ಮಾಡಿಕೊಂಡು ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಕೃಷಿ ಯೊಂದಿಗೆ ಹೈನುಗಾರಿಕೆ ಮಾಡುವುದರಿಂದ ಆರ್ಥಿಕ ಸಬಲತೆ ಸಾಧಿಸಬಹುದು. ಹೈನುಗಾರಿಕೆಯಿಂದ ಮನೆಯ ಖರ್ಚು ವೆಚ್ಚ ಗಳನ್ನು ನಿರ್ವಹಿಸಿಕೊಂಡು ಹೋಗಬಹುದು. ಹೈನುಗಾರಿಕೆಗೆ ಬೇಕಾದ ಹಸುಗಳನ್ನು ಸಾಕುವುದರಿಂದ ವ್ಯವಸಾಯಕ್ಕೆ ಬೇಕಾದ ಗೊಬ್ಬರವೂ ದೊರೆಯುತ್ತದೆ. ಹಾಲು, ಹಾಲಿನ ಉತ್ಪನ್ನಗಳನ್ನು ಮಾರಿ ಆದಾಯ ಗಳಿಸಬಹುದು ಎಂದ ಅವರು ಸರಕಾರವು ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ರೈತರ ಅಭಿವೃದ್ಧಿಗೆ ಬದ್ಧವಾಗಿದೆ. ಅವುಗಳ ಉಪಯೋಗ ಪಡೆದು ರೈತರು ಆರ್ಥಿಕವಾಗಿ ಉನ್ನತಿ ಸಾಧಿಸಬೇಕೆಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಮಾತನಾಡಿ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಾರಂಭಿಸುವುದರಿಂದ ಉತ್ತಮ ಆದಾಯ ಗಳಿಸಿ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದರು.
ಈ ವೇಳೆ ಅಡಹಳ್ಳಟ್ಟಿ ಗ್ರಾಮದ ಮುಖಂಡರು. ಯುವಕರು ಗ್ರಾಮಸ್ಥರು ಉಪಸ್ಥಿತರಿದ್ದರು.