ಸುಂಟನೂರ ಶಾಲಾ ಬಿಸಿಯೂಟ ಅವ್ಯವಸ್ಥೆಗೆ ಸಿಇಒ ಕಿಡಿ
ಆಳಂದ:ಸೆ.6: ತಾಲೂಕಿನ ಸುಂಟನೂರ ಸರ್ಕಾರಿ ಪ್ರೌಢಶಾಲೆಗೆ ಹಠಾತ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಅವರು ಶಾಲಾ ಬಿಸಿಯೂಟದಲ್ಲಿ ತರಕಾರಿ ಕೊರತೆಗೆ ಸಿಡಿಮಿಡಿಗೊಂಡು ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗೆ ಮತ್ತು ಪಾಲಕ ಪೋಷಕರ ಸಭೆ ಕರೆದು ಸೂಚಿಸಬೇಕು. ಶಾಲಾ ಮಕ್ಕಳನ್ನು ದುಡಿಯಲು ಹಚ್ಚುವ ಪಾಲಕರ ಮೇಲೆ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಇದೇ ವೇಳೆ ಸಿಇಒ ಅವರು ಸಂಚಾರ ಕೈಗೊಂಡು ಸುಂಟನೂರ ಹಾಗೂ ಕಡಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಪ್ರಮುಖ ಕಾರ್ಯಗಳನ್ನು ವೀಕ್ಷಿಸಿದರು. ಅಲ್ಲದೆ, ಬಸವಂತವಾಡಿ ಗ್ರಾಮದಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ ನೆಡಲಾಗಿರುವ 3000 ಗಿಡಗಳ ಪರ್ಯಾಯವನ್ನು ಪರಿಶೀಲನೆ ಮಾಡಿ, ಈ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಲು ಅಗತ್ಯ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ, ಅವರು ಸ್ಥಳೀಯ ಅಂಗನವಾಡಿ ಕೇಂದ್ರದ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವೀಕ್ಷಿಸಿ, ಹೊಸ ಕಟ್ಟಡದ ಕಾರ್ಯಗತಿಯನ್ನು ಪರಿಶೀಲಿಸಿದರು. ಮರುಪರಿಶೀಲನೆಗಾಗಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಸುಂಟನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಊಟದಲ್ಲಿ ಭಾಗವಹಿಸಿ, ಅಲ್ಲಿನ ಸ್ಥಿತಿಯನ್ನು ಅನುಭವಿಸಿ, ಬಿಸಿಊಟದ ಗುಣಮಟ್ಟ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಲು ಶಿಕ್ಷಕರಿಗೆ ತಾಕೀತು ಮಾಡಿದರು.
ಅರಿವು ಕೇಂದ್ರದಲ್ಲಿ ನಡೆದ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರ್ಣಗೊಳಿಬೇಕು. ಜೊತೆಗೆ ಈ ಕೇಂದ್ರದ ಕಾರ್ಯಪ್ರವೃತ್ತಿಗಳ ನಿಗಾವಗಿಸಬೇಕು.
ಜಿಪಂ ಪ್ರೊಬೇಷನರಿ ಮೇಡಂ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು, ಪಿಡಿಒ ಪ್ರವೀಣ ಜೊತೆಗಿದ್ದರು.