ವಿನಾಯಕ ಸಮಿತಿಯ ವಾರ್ಷಿಕೋತ್ಸವ ೯ ದಿನ ವಿಶೇಷ ಕಾರ್ಯಕ್ರಮ
ಕೋಲಾರ,ಸೆ,೬- ನಗರದಲ್ಲಿ ಪ್ರತಿವರ್ಷದಲ್ಲಿ ಶ್ರೀ ಅಖಂಡ ಭಾರತ ವಿನಾಯಕ ಸಮಿತಿ ವತಿಯಿಂದ ೧೧ನೇ ವಾರ್ಷಿಕ ಗಣೇಶೋತ್ಸವ ಕಾರ್ಯಕ್ರಮವನ್ನು ನಗರದ ಪ್ರವಾಸಿ ಮಂದಿರ ಬಳಿ ಮತ್ತು ಡೊಂಲೈಟ್ ವೃತ್ತದಲ್ಲಿ ಸೆ ೭ ರಿಂದ ೧೫ರವರೆಗೆ ಒಟ್ಟು ೯ ದಿನಗಳ ಕಾಲ ಹಮ್ಮಿ ಕೊಂಡಿದೆ ಎಂದು ಸಮಿತಿಯ ಸಂಸ್ಥಾಪಕ ಓಂಶಕ್ತಿ ಚಲಪತಿ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಈ ಸಮಿತಿಯನ್ನು ನೀರಾವರಿ ಹೋರಾಟದ ಹಿನ್ನಲೆಯಲ್ಲಿ ಪ್ರಾರಂಭಿಸಿ ಗಣೇಶೋತ್ಸವ ಕಾರ್ಯಕ್ರಮಗಳನ್ನು ಆಚರಿಸಿ ಕೊಂಡು ಬರಲಾಗುತ್ತಿದೆ. ಕಳೆದ ೧೧ ವರ್ಷಗಳಿಂದ ವಿವಿಧ ವಿನ್ಯಾಸಗಳ ವಿಭಿನ್ನ ಮಾದರಿ ದಾಖಲಾರ್ಹ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ನಗರದ ಜನತೆಯ ಕೊಡುಗೆಯಾಗಿ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತ ಪಡೆಸಿದರು,
ಪ್ರಸಕ್ತ ಸಾಲಿನಲ್ಲಿ ೨,೫ ಲಕ್ಷ ರೂ ವೆಚ್ಚದ ಗಣೇಶ ಮೂರ್ತಿಯನ್ನು ಬಾಂಬೆಯಿಂದ ತರಿಸಲಾಗುತ್ತಿದೆ. ೯ ದಿನಗಳ ಕಾರ್ಯಕ್ರಮಗಳು ವಿಶಿಷ್ಟತೆಯಿಂದ ಕೊಡಿದ್ದು ಸಮಾಜಕ್ಕೆ ಜಾಗೃತಿಯ ಸಂದೇಶವನ್ನು ಸಾರುವ ಮಾದರಿಯಲ್ಲಿರುತ್ತದೆ. ಕಿರುಧಾರವಾಹಿ ಕಾರ್ಯಕ್ರಮಗಳನ್ನು ನೀಡುವಂತ ಕಲಾವಿಧರನ್ನು ಆಹ್ವಾನಿಸಿಲಾಗಿದೆ ಜೀ ಟಿ.ವಿ. ಮಜಾಭಾರತ್, ಮಿಮಿಕ್ರಿ ತಂಡ ಸೇರಿದಂತೆ ನವರಸಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಭಾರಿ ವಿಶೇಷವಾಗಿ ಬಂಗಾರಪೇಟೆಯ ಪಲ್ಲವಿಮಣಿ ಅವರು ನಮ್ಮ ಜೊತೆ ಕೈ ಜೋಡಿಸಿರುವುದು ನಮಗೆ ಚೈತನ್ಯ ತುಂಬಿದಂತಾಗಿದೆ ಎಂದು ಹೇಳಿದರು,
ಸೆ,೧೫ರಂದು ಗಣೇಶ ವಿಸರ್ಜನೆಯನ್ನು ನಗರದ ರಾಜಬೀದಿಗಳಲ್ಲಿ ಮೆರವಣಿ ಮೂಲಕ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಕೇರಳದ ಚಂಡೆ ವಾದ್ಯ ತಂಡ, ವೀರಗಾಸೆ, ಗಾರುಡಿಗೊಂಬೆ ಡೊಳ್ಳು ಕುಣಿತ ಜಾನಪದ ಕಲಾತಂಡಗಳೊಂದಿಗೆ ಮೈಸೂರು ದಸಾರ ಮೆರವಣಿಗೆಯ ಮಾದರಿಯಲ್ಲಿರುವುದು. ಎಂದ ಅವರು ಈ ಹಿಂದೆ ನಗರದ ಕಠಾರಿಪಾಳ್ಯದ ಶಾಲಾ ಅವರಣದಲ್ಲಿ ಮಾಡಲಾಗುತ್ತಿತ್ತು, ಆಗಾ ವಸ್ತುಪ್ರದರ್ಶನಗಳಲ್ಲಿನ ಮಕ್ಕಳ ಆಟದ ಷೋಗಳ ಇರುತ್ತಿದ್ದವು ನಂತರ ಕಾರಣಾಂತರಗಳಿಂದ ಕಳೆದ ೧೧ ವರ್ಷಗಳಿಂದ ಪ್ರವಾಸಿ ಮಂದಿರದ ಬಳಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆಯೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬಂದಿದೆ ಎಂದರು.
ಸಮಿತಿ ಅಧ್ಯಕ್ಷ ನಾಮಾಲ ಮಂಜುನಾಥ್ ಮಾತನಾಡಿ ಗಣೇಶ ಮೂರ್ತಿಯ ಪ್ರತಿಷ್ಟಾನೆ ಪ್ರವಾಸಿ ಮಂದಿರ ಸಮೀಪದ ಎಸ್.ಎನ್.ಆರ್.ವೃತ್ತದಲ್ಲಿ ಕಾರ್ಯಕ್ರಮಗಳನ್ನು ಡೊಂಲೈಟ್ ವೃತ್ತದಲ್ಲಿ ಮಾಡಲಾಗುವುದು. ಮೆರವಣಿಗೆ ನಗರದ ಡೊಮ್‌ಲೈಟ್ ವೃತ್ತದಿಂದ ಕಠಾರಿಪಾಳ್ಯ ಸರ್ಕಾರಿ ಶಾಲೆ ಮೈದಾನದ ಮುಂದಿನ ರಸ್ತೆ ಮಾರ್ಗದ ಮೂಲಕ ಶಾರದ ಚಿತ್ರಮಂದಿರ, ಹೊಸಬಸ್ ನಿಲ್ದಾಣ, ಕಾಳಿಕಾಂಭ ದೇವಸ್ತಾನ ರಸ್ತೆ, ಎಂ.ಜಿ.ರಸ್ತೆ, ಮೂಲಕ ಇಟಿಸಿಎಂ ರಸ್ತೆ ಮೂಲಕ ಗಣೇಶ ವಿಸರ್ಜನೆ ಮಾಡಲಾಗುವುದು ಎಂದು ವಿವರಿಸಿದರು.
ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು,
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಾ.ಮ. ಅನಿಲ್‌ಬಾಬು, ಬಾಲು, ಚಂದ್ರ ಶೇಖರ್, ಶಶಿಧರ್, ಸಂತೋಷ್, ಮುರಳಿ, ವಿನಾಯಕ, ಮುಂತಾದವರು ಉಪಸ್ಥಿತರಿದ್ದರು,