ತುಂಗಭದ್ರಾ ಅಣೆಕಟ್ಟೆ ಮೇಲೆ ಪ್ರೀ ವೆಡ್ಡಿಂಗ್ ಶೂಟ್
(ಸಂಜೆವಾಣಿ ಪ್ರತಿನಿಧಿಯಿಂದ)
ಕೊಪ್ಪಳ, ಸೆ.06: ತುಂಗಭದ್ರಾ ಅಣೆಕಟ್ಟೆ ಮೇಲೆ ವರದಿ ಮಾಡಲು ಮಾಧ್ಯಮಗಳಿಗೂ ನಿಷೇಧ ಮಾಡಿರುವ ತುಂಗಭದ್ರ ಮಂಡಳಿ, ಆದರೆ, ಇಲ್ಲಿ ಮೊನ್ನೆ  ಸೆ.04 ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿದೆ.
ಇವರು ಹೊಸಪೇಟೆ ಮೂಲದವರು ಎಂದು ಹೇಳಲಾಗುತ್ತಿದೆ. ಬಗೆ-ಬಗೆಯ ಭಂಗಿಯಲ್ಲಿ ಅಣೆಕಟ್ಟೆಯ ಮೇಲೆ ವಾಹನಗಳೊಂದಿಗೆ ಫೋಟೋ ಶೂಟ್‌ಮತ್ತು ವೀಡಿಯೋ ಶೂಟ್‌ ಮಾಡಲಾಗಿದೆ.
ಇದಕ್ಕೆ ಯಾರು ಅವಕಾಶ ನೀಡಿದರು, ಈ ಭದ್ರತೆಯ ಲೋಪಕ್ಕೆ ಕಾರಣರಾದವರ ಮೇಲೆ ಏನು ಕ್ರಮ.  ಅಣೆಕಟ್ಟೆಯ ಮೇಲ್ಬಾಗದಲ್ಲಿಯೇ ಶೂಟ್ ಮಾಡಿರುವುದರ ಬಗ್ಗೆ ಸಾರ್ವಜನಿಕರಿಂದ  ಆಕ್ರೋಶ ವ್ಯಕ್ತವಾಗಿದೆ.