ನಮ್ಮ ಮಕ್ಕಳ ಭವಿಷ್ಯದ ರುವಾರಿಗಳು ಶಿಕ್ಷಕರು: ರಮೇಶ್ ಗೋಪಾಲ್
ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ನಮ್ಮ ಮಕ್ಕಳ ಭವಿಷ್ಯದ ರುವಾರಿಗಳು ಶಿಕ್ಷಕರು ಎಂದು ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ಡಾ.ರಮೇಶ್ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಅವರು ನಿನ್ನೆ ಸಂಜೆ ನಗರದ ವಾರ್ಡಾಲಾ ಕಾಲೇಜಿನಲ್ಲಿ ನಗರದ ಶುಭಮಸ್ತು ಮಹಿಳಾ ಸಂಘ
ಹಮ್ಮಿಕೊಮನಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಮಕ್ಕಳ ಭವಿಷ್ಯದ ರುವಾರಿಗಳು ಶಿಕ್ಷಕರು ಯಾಕೆಂದರೆ ಬಾಲ್ಯದ ದಿನಗಳಲ್ಲಿ  ಸರಿಯಾದ ರೀತಿಯಲ್ಲಿ ಮೌಲ್ಡ್ ಮಾಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇರುವುದೆಂದರು.
ಹಿರಿಯ ಪತ್ರಕರ್ತ ಎನ್.ವೀರಭದ್ರಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಸರ್ಕಾರದಿಂದ ನಡೆಯುವ ಸಮಾರಂಭದಲ್ಲಿ ಎಲ್ಲಾ ಶಿಕ್ಷಕರಿಗೆ ಸನ್ನಾನ,ಪ್ರಶಸ್ತಿ, ಗೌರವ ದೊರೆಯಲ್ಲ. ಆದರೂ ಅನೇಕ ಉತ್ತಮ ಶಿಕ್ಷಕರು ಇರುತ್ತಾರೆ ಅಂತಹವರನ್ನು ಇಂತಹ ಸಂಸ್ಥೆಗಳು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಗಾಂಧಿನಗರ ಠಾಣೆಯ ಪೊಲೀಸ್ ಇನ್ಸಫೆಕ್ಟರ್ ಸಿದ್ರಾಮಪ್ಪ ಗಡೇದ ಮಾತನಾಡಿ,    ನಾನು ಎರೆಡುವರೆ ವರ್ಷ ಶಿಕ್ಷಕರಾಗಿ ಕೆಲಸ ಮಾಡಿರುವೆ. ಈ ವೃತ್ತಿ ಎಲ್ಲರೂ ಗೌರವಿಸುವಂತಹದು. ಶಿಕ್ಷಕರು ತಪ್ಪು ಮಾಡಿದರೆ ಅವರ ಬಳಿ ಕಲಿಯುವ ಮಕ್ಕಳು ಹಾಳಾಗುತ್ತವೆ.
ಈಗ ಸರ್ಕಾರ ಶಿಕ್ಷಕರ ಬಳಿಯ ಬೆತ್ತ ಮತ್ತು ಪೊಲೀಸರ ಬಳಿಯ ಲಾಟಿ ಕಸಿದುಕೊಂಡಿರುವುದರಿಂದ ಮಕ್ಕಳಿಗೆ ಭಯಬೀಳಿಸಿ ಕಳಿಸುವುದಕ್ಕಿಂತ ಮುದ್ದು ಮಾಡಿ ಕಲಿಸಬೇಕಾಗಿದೆಂದರು.
ವಾರ್ಡ್ಲಾ ಕಾಲೇಜಿನ ಉಪ ಪ್ರಾಂಶುಪಾಲೆ ಪೊ. ದೋರಕಾ ಬಾಯಿ ಮಕ್ಕಳಿಗೆ ನಮ್ಮ ಸೇವೆಯಲ್ಲಿ ಉತ್ತಮ ಭವಿಷ್ಯ ರೂಪಿಸಬೇಕೆಂದರು.
ಶುಭಮಸ್ತು ಮಹಿಳಾ ಸಂಘದ ಅಧ್ಯಕ್ಷೆ ಸುಮಾರೆಡ್ಡಿ ಅಧ್ಯಕ್ಷತೆವಹಿಸಿ. ದೇಶದ ಭವಿಷ್ಯವನ್ನು ರೂಪಿಸುವ ಕಾರ್ಯ ಶಿಕ್ಷಕರದ್ದು ಅಂತಹವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮ ನಿರ್ವಹಣೆನ್ನು ಶಿಕ್ಷಣ ಇಲಾಖೆಯ ಅಧಿಕಾರಿ ಗೂಳಪ್ಪ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ 15 ಜನ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯ್ತು.