ಜಿಲ್ಲೆಯ ರೈತರು ಹೈನೋದ್ಯಮಕ್ಕೆ ಒತ್ತು ನೀಡಲಿ: ಈಶ್ವರ ಖಂಡ್ರೆ
ಬೀದರ್: ಸೆ.6:ರೈತರು ಕೃಷಿ ಜತೆಗೆ ಹೈನೋದ್ಯಮ ಕ್ಷೇತ್ರಕ್ಕೆ ಒತ್ತು ನೀಡಬೇಕು. ಇದಕ್ಕಾಗಿ ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗರಿ ಜಿಲ್ಲಾ ಹಾ ಲು ಒಕ್ಕೂಟ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಂಡ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಅನುದಾನದಡಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದ ಮೂಲಸೌಲಭ್ಯಗಳ ಉದ್ಘಾಟನಾ ಸಮಾರ ಂಭ ಹಾಗೂ ಹೈನುಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ 545 ಕ್ಷೇತ್ರದಲ್ಲಿ ಅನುದಾನ ಸದ್ಬಳಕೆ ಮಾಡದೇ ರಾಜ್ಯದ ಗಡಿ ಜಿಲ್ಲೆಯಾದ ಬೀದರ್‍ನ ಲ್ಲಿ ಡಾ.ಹೆಗ್ಗಡೆಯವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ 2.50 ಕೋಟಿ ರೂ. ಹಣ ನೀಡುವುದರೊಂದಿಗೆ ಜಿಲ್ಲೆಯಲ್ಲಿ ಹೈನು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರುವುದು ಬಹಳ ಖುಷಿ ತಂದಿದೆ. ಧರ್ಮಾಧಿಕಾರಿಗಳ ಈ ಮಹತ್ವದ ಕಾರ್ಯಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೀದರ್‍ನಲ್ಲಿ 2018ರಲ್ಲಿ ಮಿಲ್ಕ್ ಶೆಡ್ ಯೋಜನೆ ಸರ್ಕಾರ ಜಾರಿ ಮಾಡಿತ್ತು. 10 ಕೋಟಿ ರೂ. ಅನುದಾನ ನೀಡಿ ನಾನಾ ಸೌಲಭ್ಯಗಳನ್ನು ನೀಡಲಾಗಿದೆ. ಇದೀಗ ಧರ್ಮಸ್ಥಳ ಸಂಘದವರು ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಪೂಜ್ಯರು ಮಹಿಳೆಯರು ಆರ್ಥಿಕವಾಗಿ ಸಬಲರಾಗ ಲು ಜಿಲ್ಲೆಯಲ್ಲಿ 16 ಸಾವಿರ ಸಂಘಗಳ 2 ಲಕ್ಷ ಮಹಿಳೆಯರಿಎ 450 ಕೋಟಿ ರೂ. ಮೊತ್ತದ ಗ್ಯಾರಂಟಿ ಕೊಟ್ಟು ಸಾಲ ಕೊಡಿಸುವ ಕೆಲಸ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪ್ರತಿನಿತ್ಯ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಸಾಮಥ್ರ್ಯವಿದೆ. ಇದಕ್ಕೆ ಕೆಕೆಆರ್‍ಡಿಬಿ, ಸರಕಾರದಿಂದ ಆರ್ಥಿಕ ನೆರವು ನೀಡಲಾಗುವುದು. 700 ಹಳ್ಳಿಗಳಲ್ಲಿರುವ ಸಹ ಕಾರ ಸಂಘಕ್ಕೆ ಎಮ್ಮೆ, ಹಸು ಖರೀದಿಸಲು ಸಬ್ಸಿಡಿ ನೀಡಲಾವುದು ಎಂದು ತಿಳಿಸಿದರು.
6 ತಿಂಗಳಲ್ಲಿ ಲಕ್ಷ ಲೀಟರ್ ಹಾಲು ಸಂಗ್ರಹ
ಕ್ಷೀರಕ್ರಾಂತಿ ಮಾಡಲು ಬೀದರ್‍ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‍ನಿಂದ ನಾನಾ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಮುಂದಿನ 6 ತಿಂಗಳಲ್ಲಿ ಜಿಲ್ಲೆಯಲ್ಲಿ ನಿತ್ಯ ಒಂದು ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯಸಭೆ ಸದಸ್ಯರಾದ ಧ ರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಈ ಹಿಂದೆ ಜಿಲ್ಲೆಯಲ್ಲಿ ನಿತ್ಯ 18 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ನಮ್ಮ ಸಂಘವು ಫಲವಾಗಿ ಇದೀಗ 58 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಬರುವ ದಿನದಲ್ಲಿ ಇದನ್ನು ಒಂದು ಲಕ್ಷ ಲೀಟರ್‍ಗೆ ಹೆಚ್ಚಿಸುವ ಸಂಕಲ್ಪ ತೊಡಲಾಗಿದೆ. ಈ ಭಾಗದಲ್ಲಿ ಆದಾಯ ಕಡಿಮೆ ಇ ರುವ ಕಾರಣ ಕ್ಷೀರಕ್ರಾಂತಿ ಮಾಡಲು ಬೀದರ್ ಆಯ್ಕೆ ಮಾಡಿ ಎರಡು ವರ್ಷದಲ್ಲಿ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಸಹಕಾರ ಸಂಘ ಆರಂಭ, ಹೊಸ ಕಟ್ಟಡ ನಿರ್ಮಾಣ, ಅಳತೆಯ ಯಂತ್ರ, ಪರೀಕ್ಷೆ ಯಂತ್ರ,ಹಾ ಲಿನ ಕ್ಯಾನ್ ಸೇರಿದಂತೆ ನಾನಾ ಮೂಲಭೂತ ಸೌಕರ್ಯಗಳನ್ನು ಸಂಘಗಳಿಗೆ ನೀಡಲಾಗಿದೆ. ಬ ಡವರಿಗೆ ದೈನಂದಿನ ಜೀವನ ನಿರ್ವಹಣೆಗೆ ಹೈನುಗಾರಿಕೆ ಒಂದು ಮುಖ್ಯ ಕುಸುಬು. ಯಾವುದೇ ಸಮಯದಲ್ಲೂ ಇದು ಕೈಬಿಡುವುದಿಲ್ಲ. ಹೈನುಗಾರಿಕೆ ಸ್ಥರವಾದ ಮಾರುಕಟ್ಟೆ, ನಿಯಮಿತವಾದ ಆದಾಯ ಹಾಗೂ ಉದ್ಯೋಗ ಅವಕಾಶ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಗಣನೀ ಯವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೈನು ಅಭಿವೃದ್ಧಿ ಕಾರ್ಯಕ್ರಮದ ಮೂಲಕ ರೈತರಿಗೆ ಸಮತೋಲನ ಪಶು ಆಹಾರ, ಹಸಿರು ಹುಲ್ಲು ನಾಟಿ, ಕೃತಕ ಗರ್ಭಧಾರಣೆ, ಜಂತು ಹುಳು ನಿವಾರಕ ಔಷಧ ವಿತರಣೆ, ಅಧ್ಯ ಯನ ಪ್ರವಾಸ, ತರಬೇತಿ ನೀಡುವ ಮೂಲಕ ಹೈನುಗಾರಿಕೆಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ಮಾಸಿಕ ಗೌರವ ಧನ ನೀಡಿ ಸಂಘಗಳ ಬಲವರ್ಧನೆಗೆ ಪ್ರೇರಣೆ ನೀಡಲಾಗಿದೆ ಎಂದರು.
ಟ್ರಸ್ಟ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾ ತನಾಡಿ, ಜಿಲ್ಲೆಯಲ್ಲಿ ಮುಚ್ಚಿದ 86 ಹಾಲು ಸಂಘಗಳನ್ನು ಪುನಾರಂಭಿಸಲಾಗಿದೆ. ನೂತನ 15 ಹಾಲು ಸಂಘಗಳನ್ನು ಆರಂಭಿಸಲಾಗಿದೆ. ಹೊಸದಾಗ 11 ಸಾವಿರ ರೈತರು ಹೈನುಗಾರಿಕೆಯನ್ನು ಶುರು ಮಾಡಿದ್ದಾರೆ. ಈ ಹಿಂದೆ ಒಕ್ಕೂಟದಿಂದ ಪ್ರತಿನಿತ್ಯ ಸಂಗ್ರಹವಾಗುತ್ತಿದ್ದ 18 ಸಾವಿರ ಲೀಟ ರ್ ಹಾಲಿನ ಪ್ರಮಾಣ ಗರಿಷ್ಠ 52 ಸಾವಿರ ಲೀಟರ್‍ಗೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು 2023-24ನೇ ಸಾಲಿನ ಸಂಸದರ ಸ್ಥಳೀಯ ಪ್ರ ದೇಶಾಭಿವೃದ್ಧಿ ಅನುದಾನದ 2.50 ಕೋಟಿ ರೂ. ಜಿಲ್ಲೆಯ 311 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಮೂಲಸೌಲಭ್ಯಕ್ಕಾಗಿ ನೀಡಿದ್ದಾರೆ. 10 ಸಂಘದ ಹೊಸ ಕಟ್ಟಡ ನಿರ್ಮಾಣ, 109 ಸ್ವಯಂ ಚಾಲಿತ ಹಾಲು ಸಂಗ್ರಹಣಾ ಘಟಕ, 192 ಹಾಲು ಸಂಘಗಳಿಗೆ ಸ್ಟೀಲ್ ಕ್ಯಾನ್‍ಗಳನ್ನು ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ,ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಹೆಗ್ಗಡೆ ಪುತ್ರಿ ಶ್ರದ್ಧಾ ಅಮಿತ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ,ಜಿಪಂ ಸಿಇಒ ದಿಲೀಪ್ ಬದೋಲೆ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟ ನಿರ್ದೇಶಕರಾದ ಮಲ್ಲಿಕಾರ್ಜುನ ಬಿ ರಾದಾರ್, ರೇವಣಸಿದ್ದಪ್ಪ ವಿ.ಪಾಟೀಲ್, ಬಂಡುರಾವ ಕುಲಕರ್ಣಿ, ಈರಣ್ಣಾ ಝಳಕಿ, ಭೀಮ ರಾವ ಬಳತೆ, ವಿಠ್ಠಲರಡ್ಡಿ ಕೃಷ್ಣರಡ್ಡಿ, ನಾಗರಾಜ ಪಾಟೀಲ್, ಅಶೋಕ ಪಡಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ್, ಬಸವರಾಜ ಉಪ್ಪಿನ್, ಮಂಜುಳಾ ಎಸ್., ಡಾ.ರಜನೀಶ್ ವಾಲಿ, ವೀರೂಪಾಕ್ಷ ಗಾದಗಿ, ಡಾ.ನರಸಪ್ಪ ದೇವಗೊಂಡ ಇತರರಿದ್ದರು. ಡಾ.ಪಿ.ವಿ.ಪಾಟೀಲ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‍ನ ವಿವಿಧ ಯೋಜನೆ ಫಲಾನುಭವಿಗಳಿಗೆ ಡಾ.ಹೆಗ್ಗಡೆ ಸೌಲಭ್ಯಗಳನ್ನು ವಿತರಿಸಿದರು. ವಿವಿ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಸಹಸ್ರಾರು ಮಹಿಳೆಯರು, ಅಭಿಮಾನಿಗಳು, ಸಾರ್ವಜನಿ ಕರು ಪಾಲ್ಗೊಂಡಿದ್ದರು.