ಅಂಚೆ ತರಭೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.06:  ನಿವೃತ್ತಿಯ ನಂತರವೂ ಸಾಹಿತ್ಯ, ಬರವಣಿಗೆ, ಚಿತ್ರಕಲೆಯ ಮೂಲಕ ಸಾಂಸ್ಕೃತಿಕ ಸೇವೆಯಲ್ಲಿರುವ ಡಯಟ್ ನ ನಿವೃತ್ತ ಉಪನ್ಯಾಸಕ  ಆರ್. ಎಲ್. ಜಾಧವ ಮತ್ತು ಮುನ್ಸಿಪಾಲ್ ಕಾಲೇಜಿನ ನಿವೃತ್ತ ಉಪನ್ಯಾಸಕ ಏನ್.ಬಸವರಾಜ್ ಅವರನ್ನು
ಇಲ್ಲಿನ ವಿಭಾಗೀಯ ಕಚೇರಿಯ ಅಂಚೆ ತರಭೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯ್ತು.
ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ಪಿ.ಚಿದಾನಂದ ಅಧ್ಯಕ್ಷತೆ ವಹಿಸಿ, ಅಂಚೆ ಇಲಾಖೆ ಗುರುವಂದನಾ ಕಾರ್ಯಕ್ರಮದ ಮೂಲಕ ಗುರು ಶಿಷ್ಯರ ನಡುವೆ ಶುಭಾಶಯ ಹಂಚಿಕೊಳ್ಳಲು ಆನ್ಲೈನ್ ವೇದಿಕೆ ಒದಗಿಸಿ ಸಾವಿರಾರು ಶಿಕ್ಷಕರಿಗೆ ಗೌರವ ಸಲ್ಲಿಸುವ ಅವಕಾಶ ನೀಡಿದೆ. ಈ ದಿನ ದೇಶದಾದ್ಯಂತ ಅತ್ಯಂತ ಕಠಿಣ ಬೌಗೋಳಿಕ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಶುಭಾಶಯ ಪತ್ರ ಹಂಚಿಕೊಳ್ಳುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ  ಉಪನ್ಯಾಸಕರು ಅಂಚೆ ಇಲಾಖೆಯ ಪ್ರಾಮಾಣಿಕ ಜನ ಸೇವೆ ಹಾಗೂ ದೇಶ ಕಟ್ಟುವಲ್ಲಿ ಇಲಾಖೆಯ ಪಾತ್ರವನ್ನು ಸ್ಮರಿಸಿದರು.
 ಸಹಾಯಕ ಅಂಚೆ ಅಧೀಕ್ಷಕ ಅರುಣ್ ಕಾಮತ್ ಮತ್ತು ಎಸ್.ಸಿ.ವಾಲೇಕಾರ್ ಇದ್ದರು.
 ಅಂಚೆ ತರಬೇತುದಾರರಾದ ವೀರೇಶ್ ಪ್ರಾರ್ಥಿಸಿದರು, ಅಲ್ಲಾಸಾಬ್ ನಿರೂಪಿಸಿದರು, ರವಿಕುಮಾರ್ ವಂದನಾರ್ಪಣೆ ಸಲ್ಲಿಸಿದರು.
