ಕಾಂಗ್ರೆಸ್ಸಿಗರಿಗೆ ಯುವಕರ ಶಕ್ತಿ ಗೊತ್ತಾಗಲಿದೆ
ಕೆಜಿಎಫ್.ಸೆ.೬– ಕೆಜಿಎಫ್ ಕ್ಷೇತ್ರದಲ್ಲಿರುವ ಯುವಕರನ್ನು ಚಿಲ್ಲರೆ ಎಂದು ಹಿಯಾಳಿಸಿರುವ ಕಾಂಗ್ರೆಸ್ ಮುಖಂಡರಿಗೆ ಕ್ಷೇತ್ರದ ಯುವಕರ ಶಕ್ತಿ ಏನು ಎಂದು ತೋರಿಸಲಿದ್ದಾರೆ ಎಂದು ಆರ್.ಕೆ.ಪೌಂಡೇಷನ್ ಅಧ್ಯಕ್ಷ ಮೋಹನ್‌ಕೃಷ್ಣ ಶಪಥಗೈದರು.
ಗಣೇಶೋತ್ಸವ ಹಿನ್ನಲೆಯಲ್ಲಿ ಆರ್.ಕೆ.ಪೌಂಡೇಷನ್ ಸಮಾಜ ಸೇವಕ ಮೋಹನ್‌ಕೃಷ್ಣ ನಗರದ ಕಿಂಗ್‌ಜಾರ್ಜಹಾಲ್ ಸಭಾಂಗಣದಲ್ಲಿ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ನೂರಾರು ಶ್ರೀವಿನಾಯಕ ಉತ್ಸವ ಸಮಿತಿಗಳಿಗೆ ಧನ ಸಹಾಯವನ್ನು ವಿತರಿಸಿ ಯುವಕರನ್ನು ಉದ್ದೇಶಿಸಿ ಮಾತನಾಡಿ, ನನ್ನ ಜೋತೆ ಇರುವರೆಲ್ಲ ಚಿಲ್ಲರೆ ಹುಡುಗರ ಎಂದು ಕಾಂಗ್ರೆಸ್ ಮುಖಂಡ ಜಯಪಾಲ್ ನೀಡಿದ್ದ ಹೇಳಿಕೆಗೆ ಕೌಂಟರ್ ಆಟ್ಯಾಕ್ ಮಾಡಿ ಹೇಳಿಕೆಯನ್ನು ಟೀಕಿಸಿ ಹೌದು ನಾನು ಸಹ ಹುಡುಗ ನನ್ನ ಬಳಿ ಇರುವರೆಲ್ಲ ಹುಡುಗರೇ ಆದರೆ ದೇಶದ ಭವಿಷ್ಯ ರಾಜ್ಯದ ಭವಿಷ್ಯ ಹಾಗೂ ರಾಜಕಾರಣಿಗಳ ಭವಿಷ್ಯ ನೀರ್ಧಾರಿಸುವುದು ಸಹ ಹುಡುಗರೇ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡನಿಗೆ ಟಾಂಗ್ ನೀಡಿದರು.
ಶಾಸಕಿ ಒಂದು ಕಡೆ ಕೈಗಾರಿಕಾ ಹಬ್ ಮಾಡಲಾಗುವುದು ಎಂದು ಹೇಳುತ್ತಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನನಗೆ ಸಹಾಯ ಮಾಡಿ ಎಂದು ಅಧ್ಯಕ್ಷ ಆಕಾಂಕ್ಷಿಗಳೇ ಬಂದಿದ್ದು ಮತ್ತು ಅವರ ಬಳಿ ಇದ್ದ ಸಂಖ್ಯಾ ಶಕ್ತಿಯನ್ನು ತೋರಿಸಿದ್ದರು ಆದರೆ ನಗರಸಭೆ ಸದಸ್ಯರ ಮೇಲೆ ದಬ್ಬಳಿಕೆ ಮಾಡುವ ಮೂಲಕ ಅವರನ್ನು ಹಿಡಿದಿಟ್ಟುಕೊಂಡರು ಎಂದು ಹೇಳಿದರು.
೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳು
ಮುಂದಿನ ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಉತ್ತಮ ಅಭ್ಯರ್ಥಿಗಳನ್ನು ೩೫ ವಾರ್ಡ್‌ಗಳಲ್ಲೂ ಆಯ್ಕೆ ಮಾಡಿ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ನಗರಸಭೆ ಆಡಳಿತವನ್ನು ಕೈವಶಪಡಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಈ ವೇಳೆ ಸ್ವಾಭಿಮಾನಿ ಬಣದ ಮುಖಂಡರಾದ ವೇಲುಮುರುಗನ್, ಅನಂದ, ಬಿಜಿಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಮೂರ್ತಿ, ಜೆಡಿಎಸ್ ಮುಖಂಡ ಮಾಜಿ ನಗರಸಭೆ ಅಧ್ಯಕ್ಷ ದಯಾನಂದ, ಸರವಣ ಹಾಗೂ ಇತರರು ಹಾಜರಿದ್ದರು.
ಚಿತ್ರ:೦೧: ವಿನಾಯಕ ಉತ್ಸವ ಸಮಿತಿಗಳಿಗೆ ಧನ ಸಹಾಯ ಮಾಡುತ್ತಿರುವ ಆರ್.ಕೆ.ಪೌಂಡೇಷನ್ ಅಧಕ್ಷ ಮೋಹನ್‌ಕೃಷ್ಣ