ಅಧಿಕಾರ ಕಾಂಗ್ರೆಸ್ ದುರ್ಬಳಕೆ,ಆರೋಪ
ಚಿಕ್ಕಬಳ್ಳಾಪುರ, ಸೆ. ೬: ಕಾಂಗ್ರೆಸ್ ಪಕ್ಷ ಹತಾಶಗೊಂಡು ಅಧಿಕಾರದ ಆಸೆಗಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿಧಾನ ಪರಿಷತ್ ಸದಸ್ಯರನ್ನ ಚಿಕ್ಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮತದಾರರನ್ನಾಗಿ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ಬಿಜೆಪಿ ಮುಖಂಡ ಕೆ.ವಿ.ನವೀನ್ ಕಿರಣ್ ಆರೋಪ ಮಾಡಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಇದೇ ಸೆಪ್ಟೆಂಬರ್ ೧೨ರಂದುಚಿ ಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಚುನಾವಣೆಗೆ ೩೧ ನಗರಸಭಾ ಸದಸ್ಯರು ಶಾಸಕರು ಸಂಸದರು ಸೇರಿ ಒಟ್ಟು ೩೩ ಮಂದಿ ಮತದಾರರು ಚುನಾವಣೆಯಲ್ಲಿ ಭಾಗಿ ಆಗಿದ್ದರೆ ಅದು ಪ್ರಜಾಪ್ರಭುತ್ವದ ನೈತಿಕತೆ ಎಂದು ಹೇಳಬಹುದು ಆದರೆ, ಕಾಂಗ್ರೆಸ್ ಪಕ್ಷ ಆತಾಶೆಗೊಂಡು ಇದೀಗ ವಾಮ ಮಾರ್ಗಗಳಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಗದ್ದುಗೆ ಏರಲು ಅನುಸರಿಸುತ್ತಿರುವ ನೀತಿಗಳು ಪ್ರಜಾಪ್ರಭುತ್ವದ ವಿರುದ್ಧ ಎನಿಸಿದೆ ಎಂದ ಅವರು ಈಗಾಗಲೇ ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ಎಂ.ಆರ್.ಸೀತಾರಾಮ್ ಅವರನ್ನು ಚಿಕ್ಕಬಳ್ಳಾಪುರ ನಗರ ನಿವಾಸಿಗಳು ಎಂದು ನಮೂದು ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು ಇವರ ಜೊತೆಗೆ ಇನ್ನಿತರ ವಿಧಾನಪರಿಷತ್ ಸದಸ್ಯರನ್ನ ನಗರನಿವಾಸಿ ಎಂದು ಸೇರಿಸಲಾಗುತ್ತಿದ್ದು ಇದರಲ್ಲಿ ಭಾಗಿಯಾಗುತ್ತಿರುವ ಬಿ.ಎಲ್.ಓ, ತಹಸಿಲ್ದಾರ್ , ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದರು
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ ವಿ ನಾಗರಾಜ್ ಮಾತನಾಡಿ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟಂತೆ ಅನಧಿಕೃತವಾಗಿ ಹೊರಗಿನವರನ್ನ ಅಧಿಕಾರ ಕೈಹಿಡಿಯಲು ಮತದಾರರು ಎಂದು ಸೇರಿಸಲು ಮುಂದಾಗುತ್ತಿರುವುದು ಖಂಡನೀಯ ಇದರಿಂದ ಕಾಂಗ್ರೆಸ್ ಪಕ್ಷದ ನೈತಿಕತೆ ಎತ್ತ ಸಾಗಿದೆ ಎಂಬುದು ತಿಳಿಯಲಿದೆ, ಇಂತಹ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಪಕ್ಷದವರು ಏನು ಬೇಕಾದರೂ ಮಾಡುತ್ತಾರೆ ಇದು ನಾಚಿಕೆಗೇಡು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮಾತನಾಡಿ ನಾನು ಒಬ್ಬ ಮತದಾರನಾಗಿ ಮತದಾರರ ಪಟ್ಟಿಗಾಗಿ ಈಗಾಗಲೇ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ ಅವರು ನೀಡುವ ಮತದಾರರ ಪಟ್ಟಿಯಲ್ಲಿ ಸತ್ಯಾಸತ್ಯತೆ ಬಹಿರಂಗಗೊಳಲಿದೆ ಇದರಲ್ಲಿ ಏನಾದರೂ ವಾಮಮಾರ್ಗದಲ್ಲಿ ಹೆಸರುಗಳನ್ನ ಸೇರಿಸಿದರೆ ತಾನು ಸಹ ಕಾನೂನು ಹೋರಾಟ ನಡೆಸಲು ಮುಂದಾಗುವೆನು ಎಂದರು.
ಸುದ್ದಿಗೋಷ್ಠಿಯಲ್ಲಿ, ಮಾಜಿ ಅಧ್ಯಕ್ಷರಾದ ಕೆ ವಿ ಮಂಜುನಾಥ್, ಮುನಿಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಆನಂದ್ ಅನು ಜೆಡಿಎಸ್ ತಾಲೂಕು ಘಟಕದ ಕಾರ್ಯಾಧ್ಯಕ್ಷ , ಕಿಸಾನ್ ಕೃಷ್ಣಪ್ಪ, ಬಿಜೆಪಿ ಮುಖಂಡ ಸೀನಪ್ಪ, ವಾಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜೆಸಿಬಿ ಮಂಜು ಇದ್ದರು.