ಸಮಗ್ರ ಪ್ರಶಸ್ತಿ ನೀಡಲು ಎಸ್‌ಎಸ್‌ಕೆ ಪಿಯು ಕಾಲೇಜು ವಿದ್ಯಾರ್ಥಿಗಳ ಒತ್ತಾಯ
ಪಾವಗಡ, ಸೆ. ೬- ನಮ್ಮ ಕಾಲೇಜಿನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದರೂ ಸಹ ನಮಗೆ ನಿಯಮಾನುಸಾರ ಚಾಂಪಿಯನ್ ಶಿಫ್ ಟ್ರೋಫಿಯನ್ನು ನೀಡಬೇಕು ಎಂದು ಪಟ್ಟಣದ ಎಸ್.ಎಸ್.ಕೆ. ಪಿ.ಯು. ಕಾಲೇಜಿನ ಕ್ರೀಡಾಪಟುಗಳು ಅಕ್ರೋಶ ಹೊರ ಹಾಕಿದ್ದಾರೆ.
೨೦೨೪ ನೇ ಸಾಲಿನಲ್ಲಿ ಪಿ.ಯು. ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ೨-೯-೨೦೨೪ ರಿಂದ ೩-೯-೨೦೨೪ ರವರೆಗೆ ಗುರುಕುಲ ಕಾಲೇಜು ಮತ್ತು ನ್ಯೂ ಎಂಪ್ರೆಸ್ ಕಾಲೇಜು ಲಿಂಗದಹಳ್ಳಿ ಕಾಲೇಜುಗಳ ಸಹಯೋಗದಲ್ಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
೨ ದಿನಗಳ ಈ ಕ್ರೀಡಾಕೂಟದಲ್ಲಿ ವೈಯಕ್ತಿಕ ಮತ್ತು ಗುಂಪು ಅಟಗಳಲ್ಲಿ ೧೦೮ ಅಂಕಗಳನ್ನು ಪಡೆದುಕೊಂಡ ಎಸ್.ಎಸ್.ಕೆ. ಕಾಲೇಜು ಚಾಂಪಿಯನ್ ಶಿಪ್ ಪಡೆದುಕೊಂಡಿದ್ದು, ವೀಜೇತ ಕ್ರೀಡಾಪಟುಗಳಿಗೆ ಮತ್ತು ಗುಂಪು ಅಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ನಿಯಮಾನುಸಾರ ಟ್ರೋಫಿ ನೀಡದೆ ಇರುವುದನ್ನು ಕಂಡು ಎಸ್.ಎಸ್.ಕೆ. ಕಾಲೇಜಿನ ಕ್ರೀಡಾಪಟುಗಳು, ಅಯೋಜಕರ ವಿರುದ್ದ ತಿರುಗಿ ಬಿದ್ದರು.
ಸಮಗ್ರ ಪ್ರಶಸ್ತಿ ಪಡೆದುಕೊಂಡ ನಮಗೆ ಟ್ರೋಪಿ ನೀಡಲೇಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದ ಉಸ್ತುವಾರಿ ನೊಡೆಲ್ ಅಧಿಕಾರಿಯೂ ಅದ ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಕಳೆದ ೧ ವಾರದ ಹಿಂದೆಯಷ್ಟೆ ವರ್ಗವಾಗಿ ಕರ್ತವ್ಯಕ್ಕೆ ಬಂದಿದ್ದು, ಈ ಬಗ್ಗೆ ಕೂಲಂಕುಷವಾಗಿ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕ್ರೀಡಾಕೂಟದ ಪ್ರಾಯೋಜಕರಾದ ಗುರುಕುಲ ಪಿ.ಯು. ಕಾಲೇಜಿನ ಕಾರ್ಯದರ್ಶಿ ಎನ್.ಸಿ.ನಾಗಭೂಷಣ್ ಮಾತನಾಡಿ, ಈ ಕ್ರೀಡಾಕೂಟಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇವೆ. ಒಂದು ವೇಳೆ ಚಾಂಪಿಯನ್ ಶಿಪ್ ಟ್ರೋಪಿ ನೀಡಬೇಕು ಎಂದು ಹೇಳಿದ್ದರೂ ನಾವು ನೀಡಲು ಸಿದ್ಧವಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಕರಿಯಣ್ಣ, ರಾಮಾಂಜಿನಪ್ಪ, ತಿಮ್ಮಾನಾಯ್ಕ, ಮಾರಣ್ಣ, ಲಕ್ಷ್ಮಿನಾರಾಯಣ ಮತ್ತಿತರರು ಉಪಸ್ಥಿತರಿದ್ದರು.