ಶಿಕ್ಷಕರು ಭೂಮಿಯ ಮೇಲಿನ ಬ್ರಹ್ಮನಿದ್ದಂತೆ
ಲಕ್ಷ್ಮೇಶ್ವರ, ಸೆ6: ಪಟ್ಟಣದ ಜಗದ್ಗುರು ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136 ನೆಯ ಜನ್ಮ ದಿನಾಚರಣೆಯ ಅಂಗವಾಗಿ ಶಿರಹಟ್ಟಿ ಹಾಗೂ ಲಕ್ಷ್ಮೀಶರ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕ ಶಿಕ್ಷಕಿಯರ ಸನ್ಮಾನ ಸಮಾರಂಭ ಜರುಗಿತು.
ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಪಕೀರ ದಿಂಗಾಲೇಶ್ವರ ಶ್ರೀಗಳು ಮೂರು ದಶಕಗಳ ಹಿಂದೆ ಇದ್ದ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಇಂದಿನ ಶಿಕ್ಷಕರು ಮೊದಲು ತಾವೇ ಅಂಕಲಪಿ ಹಿಡಿದುಕೊಂಡು ಜ್ಞಾನಾರ್ಜನೆ ಮಾಡಿಕೊಂಡು ನಂತರ ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಾದ ಸ್ಥಿತಿಯಿದೆ.
ಶಿಕ್ಷಕರು ಭೂಮಿಯ ಮೇಲಿನ ಬ್ರಹ್ಮ ಇದ್ದಂತೆ ಯಾವ ಬ್ರಹ್ಮ ಜ್ಞಾನವನ್ನು ತುಂಬುತ್ತಾನೆಯೋ ಅದೇ ರೀತಿ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ತುಂಬುವ ಶಕ್ತಿ ಶಿಕ್ಷಕರಲ್ಲಿದೆ ಶಿಕ್ಷಕರು ಆದರ್ಶ ಆದರ್ಶ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಅಭಿವೃದ್ಧಿಯನ್ನು ಮಾಡಲು ಉತ್ತಮ ನಾಗರಿಕರನ್ನು ರೂಪಿಸುವ ಜವಾಬ್ದಾರಿ ಇದೆ ಶಿಕ್ಷಕರು ಪ್ರತಿ ಊರಿನಲ್ಲಿ ಒಬ್ಬ ರಾಧಾಕೃಷ್ಣನ್ ಒಬ್ಬ ಜ್ಯೋತಿಬಾಪುಲೆಯನ್ನು ನಿರ್ಮಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಇಂದಿನ ಆಧುನಿಕ ಶೈಕ್ಷಣಿಕ ಪದ್ಧತಿಗೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರು ಅವುಗಳನ್ನು ರೂಡಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಣ್ಣದ್ದುಗೊಳಿಸುವ ಮಹತ್ತರ ಜವಾಬ್ದಾರಿ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ವಾಸುದೇವ ವಿ ಸ್ವಾಮಿ ಅನಿಲ ಬಡಿಗೇರ್ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಮಾತನಾಡಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣನವರ ಶಿರಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದೇವಕ್ಕ ಗುಡಿಮನಿ ಉಪಾಧ್ಯಕ್ಷರಾದ ಫೀರ್ ದೂಶ ಆಡೂರ ಪ್ರವೀಣ ಬಾಳಿಕಾಯಿ ಮಾದೇವಪ್ಪ ಅಣ್ಣಿಗೇರಿ ಎಸ್ ಎಸ್ ರಾಮನಗೌಡ್ರ ಪದವಿ ಪೂರ್ವ ಕಾಲೇಜುಗಳ ಸಂಘದ ಮಂಜುನಾಥ್ ಕೊಕ್ಕರಗುಂದಿ ಶರಣಬಸವ ಪಾಟೀಲ ಡಿ ಎಚ್ ಪಾಟೀಲ್ ಸೇರಿದಂತೆ ಉಭಯ ತಾಲೂಕುಗಳ ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎನ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ್ ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರೆ ಡಿ ಎಚ್ ಪಾಟೀಲ್ ಸ್ವಾಗತಿಸಿದರು.