ವಾಹನ ವಿತರಣೆ
ಲಕ್ಷ್ಮೇಶ್ವರ, ಸೆ6: ಪಟ್ಟಣದ ಜಗದ್ಗುರು ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಅಂಗವಿಕಲ ಕಲ್ಯಾಣ ವಿಭಾಗ ಮತ್ತು ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ 3ಗಾಲಿಯ ಸ್ಕೂಟರ್ ಮತ್ತು ಬ್ಯಾಟರಿ ಚಾಲಿತ ವೀಲ್ ಚೇರನ್ನು ವಿತರಿಸಲಾಯಿತು.
ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ ಸರ್ಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಎಲ್ಲ ಇಲಾಖೆಗಳ ಮುಖಾಂತರ ಸಂಯೋಜಿಸುತ್ತಿದ್ದು ಅಧಿಕಾರಿಗಳು ಸಮರ್ಪಕವಾಗಿ ಅವುಗಳನ್ನು ಅಂಗವಿಕಲರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿ ಶಿರಹಟ್ಟಿ ತಹಶೀಲ್ದಾರ್ ಅನಿಲ್ ಬಡಿಗೇರ್ ಲಕ್ಷ್ಮೇಶ್ವರ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಮಾಂತೇಶ್ ಕೆ ತಾಲೂಕ ಎಂ ಆರ್ ಡಿ ಭಾರತಿ ಬಿ ಮೂರಶಿಳ್ಳಿ ಯು ಆರ್ ಡಿ ಮಂಜುನಾಥ್ ರಾಮಗಿರಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಂಗವಿಕಲ ಕಲ್ಯಾಣ ಪ್ರತಿನಿಧಿಗಳು ಹಾಜರಿದ್ದರು.