ಸಮಾಜದಲ್ಲಿ ಹೆಚ್ಚು ಗೌರವದ ವೃತ್ತಿ ಶಿಕ್ಷಕ ವೃತ್ತಿ
ಚನ್ನಮ್ಮನ ಕಿತ್ತೂರ, ಸೆ6: ಸಮಾಜದಲ್ಲಿ ಅತಿ ಹೆಚ್ಚು ಗೌರವ ಸಿಗುವದೆಂದರೆ ಅದು ಶಿಕ್ಷಕರ ಹುದ್ದೆಗೆ ಮಾತ್ರ. ಶಿಕ್ಷಕರು ಅದನ್ನು ಮರೆತು ಬೇರೆನಾದರೂ ಮಾಡಿದರೆ ಅದು ನಿಮಗೆ ಸಲ್ಲದು ಶಿಕ್ಷಣ ವೃತ್ತಿ ಒಂದೇ ನಮ್ಮ ಗುರುಯೆಂದು ಸಾಧನೆ ಮಾಡಿದರೆ ನೀವು-ನಿಮ್ಮ ಕುಟುಂಬ ಸುಖದಿಂದಿರಬಹುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಜಿ.ಪಂ, ತಾ.ಪಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರಾಜಗುರು ಗುರುಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.
ಸಮಾಜ, ಶಿಕ್ಷಣ ಮತ್ತು ಮಕ್ಕಳಿಗಾಗಿ ಒಳ್ಳೆಯ ಜ್ಞಾನ ತುಂಬಲು ಶ್ರಮವಹಿಸಿದ ಶಿಕ್ಷಕರನ್ನು ಗÀಮನಿಸಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡುವಂತಾಗಬೇಕು. ಮತ್ತು ನಮ್ಮ ಸರ್ಕಾರದ ಅವಧಿಯೊಳಗಾಗಿ ಕ್ಷೇತ್ರದ ಎಲ್ಲ ಶಾಲೆಗಳಿಗೆ ಸ್ಮಾರ್ಟ ಬೋರ್ಡ ತರುತ್ತೇನೆ. ಇದನ್ನು ಉಪಯೋಗಿಸಿಕೊಂಡು ಶಿಕ್ಷಕರು ಮಕ್ಕಳಿಗೆ ಉತ್ತಮ ಪಾಠ ಕಲಿಸುತ್ತಾರೆಂಬುವ ವಿಶ್ವಾಸ ನನಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿ ಹಾಸ್ಯ ಚಟಾಕಿಗಳ ಮೂಲಕ ಉಪನ್ಯಾಸ ನೀಡಿದ ಅಥಣಿ ತಾಲೂಕಿನ ರೆಡ್ಡೆÉರಹಟ್ಟಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಡಾ. ಅರ್ಚನಾ ಅಥಣಿ. ಶಿವಯೋಗಿಗಳ ನಾಡು ಅಥಣಿ, ಕಿತ್ತೂರು ಶರಣರ ನಾಡು ಎಂದರು.
ಮಕ್ಕಳಿಗೆ ಪಾಠದೊಂದಿಗೆ ಹೆಚ್ಚಿನ ಜ್ಞಾನ ತಿಳಿದುÀಕೊಳ್ಳಲು ಅವಕಾಶ ಕಲ್ಪಿಸಬೇಕು. ನಮ್ಮ ದೇಶದ ಮಕ್ಕಳು ಹೊರದೇಶಗಳಿಗೆ ಶಿಕ್ಷಣಕ್ಕಾಗಿ ಹೋಗುತ್ತಿದ್ದರು. ಅದಾಗಬಾರದೆಂದು ಸರ್ಕಾರ ನಮ್ಮ ದೇಶದ ಶಾಲೆಗಳಲ್ಲಿಯೇ ಮಕ್ಕಳಿಗಾಗಿ ಉತ್ತಮ ಶಿಕ್ಷಣ ಕೊಡುತ್ತಿದ್ದು. ಶಿಕ್ಷಕರು ಅದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದರೊಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ವೈಜ್ಞಾನಿಕ ತಂತ್ರಜ್ಞಾನದಿಂದ ಶಿಕ್ಷಣ ನೀಡಬೇಕಾಗಿದೆ.

ಆರ್ಶೀವಚನ ನೀಡಿ ಮಾತನಾಡಿದ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಸಂಸ್ಥಾನ ಕಲ್ಮಠ ದೇಶ ಅಭಿವೃದ್ಧಿಯಾಗಬೇಕಾದರೆ ಹಣ ಇದ್ದರೆ ಸಾಲದು. ಶಿಕ್ಷಣ ಮುಖ್ಯವಾಗಿದೆ. ಮಕ್ಕಳಿಗೆ ಗುರುಗಳಾದವರು ಗುರಿಯಿಟ್ಟುಕೊಂಡು ಪಾಠ ಕಲಿಸಬೇಕೆಂದರು.
ಪ್ರಾಸ್ತಾವಿಕವಾಗಿ ನಿವೃತ್ತ ಶಿಕ್ಷಣ ಇಲಾಖೆ ಆಯುಕ್ತ ವೆಂಕಟೇಶ ಮಾಚಕನೂರ ಮಾತನಾಡಿದರು.
ಬಿಇಓ ಕಛೇರಿಯ ಗ್ರಂಥಾಲಯಕ್ಕೆ ಶಿಕ್ಷಕ ಸಿದ್ದಪ್ಪ ಹುಲಮನಿ ತಾಯಿಯ ಸ್ಮರಣಾರ್ಥ 25 ಸಾವಿರ ರೂ. ದೇಣಿಗೆಯಾಗಿ ಪುಸ್ತಕ ನೀಡಿದರು.
