ಪರಿಸರಕ್ಕೆ ಹಾನಿಯಾಗದಂತೆ ಹಬ್ಬ ಮಾಡೋಣ: ವಿಶ್ವನಾಥ್
ತುಮಕೂರು, ಸೆ. ೬- ಪರಿಸರ ಸ್ನೇಹಿ ಗಣಪತಿಯನ್ನು ಬಳಸೋಣ. ಕೆಮಿಕಲ್ ಹಾಗೂ ಪಿ.ಓ.ಪಿ. ಗಣಪತಿಯನ್ನು ತಿರಸ್ಕರಿಸಿ ಪರಿಸರ ಸ್ನೇಹಿ ಹಬ್ಬವನ್ನು ಮಾಡೋಣ ಎಂದು ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟೆಂಟ್ ಎಸ್.ವಿಶ್ವನಾಥ್ ಹೇಳಿದರು.
ನಗರದ ವರಾನ ಗ್ಲೋಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಅನನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ಮಾಡುವ ಮೂರು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಪತಿ ಮಾಡುವ ಕಲೆಯ ಕಾರ್ಯಾಗಾರದಲ್ಲಿ ತರಬೇತಿ ಪಡೆದು ಗಣಪತಿಯನ್ನು ಸ್ವಯಂ ವಿದ್ಯಾರ್ಥಿಗಳೇ ನಿರ್ಮಿಸಿದರು.
ಅನನ್ಯ ಪದವಿ ಪೂರ್ವ ವಿದ್ಯಾರ್ಥಿಗಳು ಅವರ ಮನೆಯ ಗಣಪತಿ ಪೂಜೆಗೆ ಅವರೇ ತಯಾರಿಸಿದ ಗಣಪತಿಯನ್ನು ಪೂಜಿಸಬಹುದು ಎಂದು ಹರುಷ ವ್ಯಕ್ತಪಡಿಸಿದರು.
ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೂ ಗಣಪತಿಯನ್ನು ಮಾಡುವ ತರಬೇತಿ ನೀಡಲಾಗಿತ್ತು.
ವಿದ್ಯಾರ್ಥಿಗಳಿಗೆ ಗಣಪತಿಯನ್ನು ವೀರಬಸಪ್ಪ ಬಿ ಕುಂಬಾರ್ ರವರು ವಿದ್ಯಾರ್ಥಿಗಳಿಗೆ ಗಣಪತಿಯನ್ನು ತಯಾರಿಸುವ ಕಾರ್ಯಾಗಾರಕ್ಕೆ ತರಬೇತುದಾರರಾಗಿ ಆಗಮಿಸಿದ್ದರು.
ಕಾರ್ಯಾಗಾರದಲ್ಲಿ ಅನನ್ಯ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಉಮೇಶ್, ಅನನ್ಯ ಸಂಸ್ಥೆಯ ಟಸ್ಟಿ ಡಾ.ಹೆಚ್.ಹರೀಶ್, ತುಮಕೂರಿನ ಖ್ಯಾತ ಮನೋವಿಕಾಸ ತಜ್ಞ ಸಿ.ಸಿ. ಪಾವಟೆ, ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಅನನ್ಯ ಪದವಿ ಪೂರ್ವ ಕಾಲೇಜಿನ ಆರ್.ಆರ್.ರಘು ಮತ್ತಿತರರು ಉಪಸ್ಥಿತರಿದ್ದರು.