ಶಿಕ್ಷಣ ವೃತ್ತಿಯು ಪ್ರವೃತ್ತಿಯಾಗಬೇಕು
ಬಾಗಲಕೋಟೆ, ಸೆ6: ರಾಷ್ಟ್ರಮಟ್ಟದಲ್ಲಿ ಗುರುವಿನ ಸ್ಥಾನವು ಉನ್ನತವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನ ಯುಗದಲ್ಲಿರುವ ಶಿಕ್ಷಣ ವೃತ್ತಿಯು ಇಂದು ಪ್ರವೃತ್ತಿಯಾಗಬೇಕು ಎಂದು ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಅವರು ಹೇಳಿದರು.
ಅವರು ಗುರುವಾರ ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶಿಕ್ಷಕರು ರಾಷ್ಟ್ರವನ್ನು ಕಟ್ಟುವದರೊಂದಿಗೆ ಶಿಕ್ಷಕರು ರಾಷ್ಟ್ರವನ್ನು ಉತ್ತಮವಾಗಿ ಆಳಬಹುದು ಎಂಬುದನ್ನು ಭಾರತದ ಪ್ರಥಮ ಉಪರಾಷ್ಟ್ರಪತಿಯಾಗಿ, ಎರಡನೆಯ ರಾಷ್ಟ್ರಪತಿಗಳಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಬದುಕು ಬೆಳಗು ಸಾಮಥ್ರ್ಯ ಶಿಕ್ಷಕನಲ್ಲಿದೆ. ಆಧುನಿಕ ಕಾಲದ ಶಿಕ್ಷಣ ರಂಗವು ಕೇವಲ ವೃತ್ತಿಯಾಗದೇ ಪ್ರವೃತ್ತಿಯಾದರೆ ಸಮರ್ಥವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.