ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ: ತರಬೇತಿ
ಬಾಗಲಕೋಟ, ಸೆ6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಾಗಲಕೋಟ ಜಲ್ಲೆಯವರ ವತಿಯಿಂದ ನಗರದ ರೈತ ಭವನದಲ್ಲಿ ದುಶ್ಚಟ ಮುಕ್ತ ಯುವ ಸಮಾಜ ನಿರ್ಮಾಣ ಮಾಡಲು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ 200 ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ ವಿದ್ಯಾರ್ಥಿ ಜೀವನ ನಡೆಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಯೋಜನೆಯ ಅಖೀಲ ಕರ್ನಾಟಕ ಜನಜಾಗೃತಿವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ ವಿನ್ಸೆಂಟ ಪಾಯಸ ರವರು ಕಾರ್ಯಕ್ರದ ಉದ್ಘಾಟನೆ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳ ತರಬೇತಿ ನೀಡಿದರು. ದುಶ್ಚಟ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಯುವಶಕ್ತಿ ಅತ್ಯಂತ ಪ್ರಾಮುಖ್ಯ. “ಯುವಶಕ್ತಿ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ” ಮಾಡಲು ಸಾಧ್ಯ ಎಂದು ತಿಳಿಸುತ್ತಾ ಜಿಲ್ಲೆಯಲ್ಲಿ ಈ ವರ್ಷ 200 ಶಾಲೆ, ಕಾಲೀಜುಗಳಿಗೆ 2000 ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀಕಾಂತ ಸಂಧಿಮನಿ ನಿರ್ವಹಿಸಿ ಮಾತನಾಡಿದರು. ಜಿಲ್ಲಾ ನಿರ್ದೇಶಕರು ಚನ್ನಕೇಶವ, ನಿಕಟ ಪೂರ್ವ ಅಧ್ಯಕ್ಷ ರವೀಂದ್ರ ಒಂದಕುದರಿ, ವೇದಿಕೆಯ ಸದಸ್ಯರು ಆರು ತಾಲೂಕಿನ ತರಬೇತಿದಾರರು, ಯೋಜನಾಧಿಕಾರಿಗಳು ಭಾಗವಹಿಸಿದರು ಯೋಜನಾಧಿಕಾರಿ ನಾಗೇಶ ಕಾರ್ಯಕ್ರಮ ನಿರ್ವಹಿಸಿದರು. ಯೋಜನಾಧಿಕಾರಿಗಳು ಮಾಹಾಂತೇಶ ವಂದಿಸಿದರು ಎಂದು ಬಾಗಲಕೋಟ ಯೋಜನಾಧಿಕಾರಿಗಳು ಬಸವರಾಜ ಅಂಗಡಿ ತಿಳಿಸಿದರು.