ಗೌರಿ ಹಬ್ಬ: ಮಹಿಳೆಯರಿಗೆ ಬಾಗಿನ ವಿತರಣೆ
ಬೆಂಗಳೂರು.ಸೆ೬:ಜಯನಗರ ವಿಧಾನಸಭಾ ಕ್ಷೇತ್ರ: ಶಾಸಕರ ನಿವಾಸದಲ್ಲಿ ಗೌರಿ,ಗಣೇಶ ಹಬ್ಬದ ಪ್ರಯುಕ್ತ ಗೌರಿ ಪೂಜೆ ಮತ್ತು ೫೦೦ ಸುಮಂಗಲಿಯರಿಗೆ ಬಾಗಿನ ವಿತರಿಸಲಾಯಿತು.
ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ ಶಾಸಕ ಸಿ.ಕೆ.ರಾಮಮೂರ್ತಿರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಹೆಚ್.ಸಿ.ನಾಗರತ್ನ ರಾಮಮೂರ್ತಿ, ಚಲನಚಿತ್ರ ನಟರು ಹಾಗೂ ಬಿಜೆಪಿ ಮಹಿಳಾ ಮುಖಂಡರುಗಳಾದ ಶ್ರೀಮತಿ ಮಾಳವಿಕಾ ಅವಿನಾಶ್, ತಾರಾ ಅನುರಾಧ ರವರು ಮಹಿಳೆಯರಿಗೆ ಬಾಗಿನ ವಿತರಣೆ ಮಾಡಿದರು. ಸುಧಾಮೂರ್ತಿ ಅವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಗೌರಿ ಹಬ್ಬವಾಗಿದೆ, ಮಹಿಳೆಯರಿಗೆ ಗೌರಿ ಹಬ್ಬದ ಸಂದರ್ಭದಲ್ಲಿ ತವರಿನಿಂದ ಬಾಗಿನವನ್ನು ಮಹಿಳೆಯರು ನೀಡಲಾಗುತ್ತದೆ.
ಎಲ್ಲರು ಸಂಸ್ಕೃತಿ, ಪದ್ದತಿ ಪಾರಂಪರಿಕ ಸಂಪ್ರಾದಯ ಉಳಿಸಬೇಕು ಇಂದಿನ ಯುವ ಸಮೂಹ ತಿಳಿಸಬೇಕು.ಸೋಮಾರಿಗಳಾಬೇಡಿ, ಎಲ್ಲರು ಕಾಯಕ ಮಹತ್ವ ಅರಿತು ದುಡಿದು ದೇಶ ಅಭಿವೃದ್ದಿ ಕೈಡೋಡಿಸಬೇಕು ಎಂದು ಹೇಳಿದರು.
ಶಾಸಕ ಸಿ.ಕೆ.ರಾಮಮೂರ್ತಿರವರು ಮಾತನಾಡಿ ಜಯನಗರ ವಿಧಾನಸಭಾ ಕ್ಷೇತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ, ಸಂಪ್ರಾದಯ ಸಾಂಸ್ಕೃತಿಕ ಕೇಂದ್ರವಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಜನರು ನನ್ನ ಕುಟುಂಬದಂತೆ ಎಲ್ಲರು ಒಟ್ಟಾಗಿ ಹಬ್ಬದ ಅಚರಣೆ ಮಾಡಬೇಕು ಎಂಬ ಉದ್ದೇಶದಿಂದ ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ತವರಿನಿಂದ ಬಾಗಿನ ಕೊಡುವಂತೆ ನನ್ನ ಮನೆಯಿಂದ ಮಹಿಳೆಯರಿಗೆ ಬಾಗಿನ ನೀಡಲಾಗುತ್ತಿದೆ.ಗೌರಿ ವ್ರತ ಅಚರಣೆಯಿಂದ ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದ್ದಿ ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು.