ಮುಡಾ ಹಿಂದಿನ ಆಯುಕ್ತರೂ ಸೇರಿ 6 ಮಂದಿ ವಿರುದ್ಧ ರಾಜ್ಯಪಾಲರಿಗೆ ದೂರು
ಸಂಜೆವಾಣಿ ನ್ಯೂಸ್
ಮೈಸೂರು: ಸೆ.06:– ನಮಗೆ ಸೇರಿದ ಭೂಮಿಯ ಮೇಲೆ ನಕಲಿ ಜಿಪಿಎ ಸೃಷ್ಠಿಸಿ ವಂಚನೆ ಮಾಡಿದ್ದಾರೆಂದು ಹಿಂದಿನ ಮೈಸೂರು ನಗರಾಭಿವೃದ್ಧಿ ಆಯುಕ್ತರೂ ಸೇರಿ ಆರು ಮಂದಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರಾದ ಮಂಜುನಾಥ್ ಎಸ್.ಗೌಡ ಮಾತನಾಡಿ, ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂ.118ರಲ್ಲಿ 5.14ಎಕರೆ ಜಮೀನು ವಿಚಾರದಲ್ಲಿ ಎಂ.ಬಿ.ಪೆÇನ್ನಪ್ಪ ಎಂಬುವರ ಜೊತೆ ಹಿಂದಿನ ಮುಡಾ ಆಯುಕ್ತರಾಗಿದ್ದ ಎಚ್.ಎಸ್.ದಿನೇಶ್ ಕುಮಾರ್ ಶಾಮೀಲಾಗಿ ವಂಚಿಸಿರುವ ಬಗ್ಗೆ ಸಂಪೂರ್ಣ ದಾಖಲೆಗಳ ಸಮೇತ ನಾಲ್ಕು ಪುmಗಳ ದೂರನ್ನು ರಾಜ್ಯಪಾಲರಿಗೆ ನೀಡಿರುವುದಾಗಿ ತಿಳಿಸಿದರು. ಸದರಿ ಭೂಮಿಯೂ ಬಿ.ಎಂ ಸುಬ್ರಹ್ಮಣ್ಯ ಹಾಗೂ ದೇವಕಿ ದಂಪತಿ ಮತ್ತು ಪುತ್ರ ವಿಕ್ಕಿ ಎಂಬುವರಿಗೆ ಸೇರಿದ್ದಾಗಿದೆ.
ಪೆÇನ್ನಪ್ಪ ಅವರು ಸುಬ್ರಹ್ಮಣ್ಯ ಅವರ ಭಾಮೈದುನನಾಗಿದ್ದಾರೆ. ಸುಬ್ರಹ್ಮಣ್ಯ ದಂಪತಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. ಆ ಸಂದರ್ಭದಲ್ಲಿ ಪೆÇನ್ನಪ್ಪ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಜಿ.ಪಿ.ಎ ಸೃಷ್ಟಿ ಮಾಡಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ವಿದೇಶದಿಂದ ಬಂದ ನಂತರ ಮುಡಾ ಆಯುಕ್ತರಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಬಳಿಕ ರಾತ್ರೋರಾತ್ರಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಶಾಮೀಲಾಗಿರುವ ಬಗ್ಗೆ ದಾಖಲೆಗಳಿವೆ ಎಂದು ಹೇಳಿದರು.
ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಎಂಟು ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಕೊಡುತ್ತಿಲ್ಲ. ಮುಡಾ ಹಗರಣದ ತನಿಖೆ ನಡೆಯುತ್ತಿದೆ. ಹಾಗಾಗಿ ಯಾವುದೇ ಮಾಹಿತಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಕಿ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ ಅವರು ಎಂ.ಬಿ.ಪೆÇನ್ನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿ, ಕಾರ್ಯದರ್ಶಿ, ವಲಯ ಕಚೇರಿ-3ರ ಸಹಾಯಕ ಕಾರ್ಯಪಾಲಕ ಅಭಿಯಂತರ, ಕಿರಿಯ ಅಭಿಯಂತರರ ವಿರುದ್ಧ 50 ಪುಟಗಳ ಸಾಕ್ಷಾ?ಯಧಾರ ಸಮೇತ ದೂರು ನೀಡಿದ್ದಾರೆಂದರು.
ದೂರು ದಾರರಾದ ದೇವಕಿ ಸುಬ್ರಹ್ಮಣ್ಯ ಮಾತನಾಡಿ, ನಮಗೆ ಅನ್ಯಾಯವಾಗಿದ್ದು, ನಮಗೂ ಅಲೆದಾಡಿ ಸಾಕಾಗಿದೆ. ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದರು. ಇದೇ ವೇಳೆ ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.