ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ ಶಾಸ್ತ್ರೀಜಿ ಜಯಂತಿ
ಕೊಲ್ಹಾರ:ಅ.3: ಅಹಿಂಸೆಯ ಪ್ರತಿಪಾದನೆಯ ಮೂಲಕ ಮಹಾತ್ಮ ಗಾಂಧಿಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರೆ, ತಮ್ಮ ದಿಟ್ಟ ನಿರ್ಧಾರಗಳ ಮೂಲಕ ವಿಶ್ವದ ಭೂಪಟದಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಲಾಲ್ ಬಹದ್ದೂರ ಶಾಸ್ತ್ರೀಜಿಯವರಿಗೆ ಸಲ್ಲುತ್ತದೆ ಎಂದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಉಸ್ಮಾನ್ ಪಟೇಲ ಖಾನ್ ಹೇಳಿದರು.
ಪಟ್ಟಣದ ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಮಹಾತ್ಮ ಗಾಂಧಿಜಿಯವರು 1869 ಅಕ್ಟೋಬರ್ 2 ರಂದು ಗುಜರಾತಿನ ಪೆÇೀರಬಂದರಿನಲ್ಲಿ ಜನಿಸಿದರು ವಕೀಲರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯವಾದಿ ಚಳುವಳಿಯ ಮುಖ್ಯಸ್ಥರಾಗಿ ದಂಡಿ ಯಾತ್ರೆ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಚಳವಳಿ, ಅಸಹಕಾರ ಚಳವಳಿಯಂತಹ ಮುಂತಾದ ಚಳವಳಿಗಳ ಮೂಲಕ ಅಹಿಂಸಾತ್ಮಕ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ರಾಷ್ಟ್ರಪಿತ ಎಂದು ಹೆಸರಾದ ಅವರನ್ನು ಆದರಪೂರ್ವಕವಾಗಿ ಗೌರವಿಸಲು ನಾವು ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸುತ್ತೇವೆ ಎಂದರು.
ಲಾಲ್ ಬಹದ್ದೂರ ಶಾಸ್ತ್ರೀಜಿಯವರು ಶರದ್ ಪ್ರಸಾದ್ ಶ್ರೀವಾಸ್ತವ ಮತ್ತು ರಾಮದುಲಾರಿ ದೇವಿ ದಂಪತಿಗಳಿಗೆ ಉದರದಲ್ಲಿ ಅಕ್ಟೋಬರ್ 2, 1904 ರಂದು ಜನಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಹೋರಾಟಗಾರರಾಗಿ ಭಾಗವಹಿಸಿ ಭಾರತ ದೇಶದ ಎರಡನೆಯ ಪ್ರಧಾನಮಂತ್ರಿಗಳಾಗಿ ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದರು, ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ದೆಸೆಯಿಂದ ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿದರು ಅವರ “ಜೈ ಜವಾನ್ ಜೈ ಕಿಸಾನ್” ಘೋಷಣೆ ಸರ್ವಕಾಲಕ್ಕೂ ಪ್ರಸ್ತುತ ಎಂದು ಅವರು ಹೇಳಿದರು.
ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳು, ವೇ.ದ.ಮೂ ಚಂದ್ರಶೇಖರಯ್ಯ ಹಿರೇಮಠ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ ಪತಂಗಿ, ತಾಲೂಕ ಹೋರಾಟ ಸಮಿತಿಯ ಅಧ್ಯಕ್ಷ ಈರಣ್ಣಗೌಡ ಕೋಮಾರ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಕಲ್ಲಪ್ಪ ಕಾಖಂಡಕಿ, ಇಸ್ಮಾಯಿಲಸಾಬ ತಹಸೀಲ್ದಾರ, ಮಹೇಶ ಗಿಡ್ಡಪ್ಪಗೋಳ, ಜಾಕೀರ ಸೌಧಾಗರ, ಮಶಾಕ ಬಳಗಾರ ಹಾಗೂ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.