ಶಾಸಕ ಪ್ರಭು ಚವ್ಹಾಣರಿಂದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ
ಔರಾದ : ಅ.3:ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಹಾತ್ಮ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು.
ಪಟ್ಟಣದ ಶಾಸಕರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ, ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದ ಶಾಸಕರು ಬಳಿಕ ಪಟ್ಟಣದ ಬಟ್ಟೆ ಅಂಗಡಿಗೆ ತೆರಳಿ ಔರಾದ(ಬಿ) ಪಟ್ಟಣದಲ್ಲಿ ಪ್ರತಿದಿನ ಸ್ವಚ್ಛತೆಯ ಕೆಲಸ ಮಾಡುವ ಸುಮಾರು 50 ಜನ ಪೌರ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ಕೊಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಗುವುದೆಂದು ಹೆಳಿದರು.
ನಂತರ ತಾವೂ ಕೂಡ ಖಾದಿ ಬಟ್ಟೆಗಳನ್ನು ಖರೀದಿಸಿದರಲ್ಲದೇ ಪ್ರಮುಖರು ಮತ್ತು ಆತ್ಮೀಯರಿಗೆ ಖಾದಿ ಬಟ್ಟೆಗಳನ್ನು ಕೊಡಿಸುವ ಮೂಲಕ ಖಾದಿ ಬಟ್ಟೆಗಳ ಬಳಕೆಗೆ ಪ್ರೇರಣೆ ನೀಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ತರಲು ಗಾಂಧೀಜಿಯವರು ಖಾದಿ ಬಟ್ಟೆಯ ಬಳಕೆಗೆ ಕರೆ ನೀಡಿದ್ದರು. ಸ್ವಾವಲಂಬನೆಯ ಸಂಕೇತವಾಗಿರುವ ಖಾದಿ ಬಟ್ಟೆಗಳ ಬಳಕೆಯ ಬಗ್ಗೆ ಜನರಲ್ಲಿ ಉತ್ತೇಜನ ನೀಡಬೇಕು. ಈ ದಿಶೆಯಲ್ಲಿ ಪರಿಶ್ರಮ ವಹಿಸುತ್ತಿದ್ದೇನೆ ಎಂದರು.
ಔರಾದ(ಬಿ) ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ಸಂಕಲ್ಪ ಹೊಂದಿದ್ದು, ಅದಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಪೌರ ಕಾರ್ಮಿಕರು ಈ ಕೆಲಸಕ್ಕೆ ಸಹಕರಿಸಬೇಕು. ಪಟ್ಟಣದ ಎಲ್ಲ ವಾಡ್ರ್ಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಚ್ಛತೆಯ ಕಾರ್ಯವಾಗಬೇಕು. ಎಲ್ಲರೂ ಸ್ವಚ್ಛತೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಪೌರ ಕಾರ್ಮಿಕರಿಗೆ ಸೂಚಿಸಿದರು.
ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ ಹಾಗೂ ಮತ್ತಿತರೆ ಮುಖಂಡರು ಸಾಥ್ ನೀಡಿದರು.
ತಾಲ್ಲೂಕು ಕೇಂದ್ರವಾಗಿರುವ ಔರಾದ(ಬಿ) ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಜನ ಪ್ರಯಾಣಿಸುತ್ತಾರೆ. ಹಾಗಾಗಿ ಬಸ್‍ನಿಲ್ದಾಣ ಸದಾ ಶುಚಿಯಾಗಿಡಬೇಕು. ಎಲ್ಲ್ಲಂದರಲ್ಲಿ ಕಲ ಹಾಕದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಸಬೇಕೆಂದು ಡಿಪೆÇೀ ವ್ಯವಸ್ಥಾಪಕರಿಗೆ ಸೂಚಿಸಿದರು. ಇದೇ ವೇಳೆ ಪ್ರತಿದಿನ ಸಂಜೆ ವೇಳೆ ಬೀದರ್-ಔರಾದ್ ನಡುವೆ ಸಂಚರಿಸುವ ಬಸ್‍ಗಳನ್ನು ಕಡಿತಗೊಳಿಸಿದ್ದು, ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆಂದು ಸಾರ್ವಜನಿಕರಿಗೆ ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಸ್ಥಳದಲ್ಲಿದ್ದ ಡಿಪೆÇೀ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಸಂಜು ಮುರ್ಕೆ, ಸಂಜು ವಡೆಯರ್, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಸುಜಿತ ರಾಠೋಡ್, ಸಂಜು ವಡೆಯರ್, ಕೇರಬಾ ಪವಾರ್, ಸಂದೀಪ ಪಾಟೀಲ, ಸಿದ್ರಾಮಪ್ಪ ನಿಡೋದಾ, ಅಶೋಕ ಅಲ್ಮಾಜೆ, ಬಾಬು ಪವಾರ್, ಉದಯ ಸೋಲಾಪೂರೆ, ಬಾಲಾಜಿ ವಾಗಮಾರೆ, ಬಂಟಿ ರಾಂಪೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ:
ಗಾಂಧಿ ಜಯಂತಿಯ ನಿಮಿತ್ತ ‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಶಾಸಕರು ಅ.2ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಕೈಯಲ್ಲಿ ಪೆÇರಕೆ ಹಿಡಿದು ಬಸ್ ನಿಲ್ದಾಣದ ಆವರಣವನ್ನು ಶುಚಿಗೊಳಿಸಿದರು.