ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು :ಡಾ ರಜನೀಶ ವಾಲಿ
ಬೀದರ:ಅ.3:ರೋಟರಿ ಕ್ಲಬ್ ಬೀದರ ವತಿಯಿಂದ ನಗರದ ಹೊಟೆಲ್ ಸುಪ್ರಿಯಾ ಕಾಂಟಿನೆಂಟಲ್ ನಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರ ನಿರ್ಮಾಣ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ ರಜನೀಶ ವಾಲಿ ಅವರು ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಭೋದನೆಯೊಂದಿಗೆ ಮಕ್ಕಳು ತಪ್ಪು ಮಾಡಿದಾಗ ಸೂಕ್ಷ್ಮವಾಗಿ ತಿದ್ದಿ ಉತ್ತಮ ಪ್ರಜೆಯಾಗಲು ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಾರೆ.
ನಮ್ಮ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಡುವವರೆ ನಿಜವಾದ ಶಿಕ್ಷಕರು ಆದರೆ ಇತ್ತೀಚಿನ ಶಿಕ್ಷಕ ವೃತ್ತಿಯ ಬಗ್ಗೆ ಗೌರವ ಕಡಿಮೆ ಆಗುತ್ತಿದೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಶಿಕ್ಷಕರ ಮೇಲಿದೆ. ಅನೇಕ ಅರಸು ಮನೆತನಗಳಾಳದ ಬೀದರ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಶ್ರೀಮಂತಿಕೆಯಿಂದ ಕೂಡಿದರೂ ಶೈಕ್ಷಣಿಕವಾಗಿ ನಾವಿನ್ನೂ ಪ್ರಗತಿ ಸಾಧಿಸುವತ್ತ ಸಾಮೂಹಿಕವಾಗಿ ಪ್ರಯತ್ನಿಸಬೇಕಿದೆ. ಜಿಲ್ಲೆಯ ಉತ್ತಮ ಫಲಿತಾಂಶಕ್ಕೆ ನಾವೆಲ್ಲರೂ ಕೈಜೋಡಿಸಬೇಕೆಂದು ನುಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಪೂರ್ಣಿಮಾ ಜಾರ್ಜ್ ಅವರು ಮಾತನಾಡಿ ಶಿಕ್ಷಣ ವಿದ್ದರೆ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ. ಶಿಕ್ಷಕರಾದವರು ಶಿಕ್ಷಣದ ಮೂಲಕ ವೈಚಾರಿಕತೆ ಬೆಳೆಸಿಕೊಳ್ಳಬೇಕು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ ಪಡೆದ ಶಿಕ್ಷಣ ಸಾರ್ಥಕ.
ಶಿಕ್ಷಕರಾದವರು ತುಂಬಾ ಓದಿದ್ದೀವಿ ನಮಗೆ ಎಲ್ಲವೂ ಗೊತ್ತು ಎಂಬ ಹಮ್ಮು ಬಿಮ್ಮು ಬಿಟ್ಟು ಮಕ್ಕಳ ಮನಸ್ಥಿತಿ ಅರ್ಥ ಮಾಡಿಕೊಂಡು ಅವರ ಆಳಕ್ಕೆ ಇಳಿದು ತಿಳಿಯುವಂತೆ ಪಾಠ ಮಾಡಬೇಕು. ಮಕ್ಕಳಿಗೆ ನೈತಿಕ ಶಿಕ್ಷಣದ ಜೊತೆ ಮೌಢ್ಯತೆ, ಅಂಧಶ್ರದ್ಧೆಗಳನ್ನು ಹೋಗಲಾಡಿಸಿ ಸಂಸ್ಕೃತಿ ಸಂಸ್ಕಾರ ನಾಡಪ್ರೇಮ ದೇಶಪ್ರೇಮ ಜೊತೆ ಕುಟುಂಬದ ಸಂಭಂಧಗಳ ಬಗ್ಗೆ ಪರಿಚಯ ಮಾಡಿಕೊಡಬೇಕು. ಆವಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಾಗುತ್ತೆ ಎಂದು ನುಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಸೋಮಶೇಖರ ಪಾಟೀಲ ಅವರು ಮಾತನಾಡಿ ರೋಟರಿ ಸಂಸ್ಥೆ ಶತಮಾನದಿಂದಲೂ ಜನಪರವಾದಂತಹ ಆರೋಗ್ಯ, ಶಿಕ್ಷಣ, ಯುವ, ಮಹಿಳಾ ಸಬಲಿಕರಣ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಪ್ರತಿ ವರ್ಷವೂ ಶಿಕ್ಷಕರ ದಿನಾಚರಣೆ ಆಚರಿಸುತ್ತ ಬಂದಿದ್ದು ಈ ವರ್ಷ ಕರ್ನಾಟಕ ನಾಮಕರಣ 50 ರ ಸಂಧರ್ಭದಲ್ಲಿ ಜಿಲ್ಲೆಯ ವಿಷಯವಾರು ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯಮಾಡುತ್ತಿರುವ ಸುಮಾರು 50 ಆದರ್ಶ ಶಿಕ್ಷಕರನ್ನು ಗುರುತಿಸಿ ರಾಷ್ಟ್ರ ನಿರ್ಮಾಣ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಬರುವ ದಿನಗಳಲ್ಲಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ರೋಟರಿ ಸಂಸ್ಥೆ ಶ್ರಮಿಸಲಿದ್ದು ಅಗತ್ಯವಾದ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ನಿಕಟ ಪೂರ್ವ ಸಹಾಯಕ ಗವರ್ನರ್ ರವಿ ಮೂಲಗೆ ಉಪಸ್ಥಿತರಿದ್ದರು. ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷರು ಹಿರಿಯ ಅಭಿಯಂತರ ಶ್ರೀ ಹಾವಶೆಟ್ಟಿ ಪಾಟೀಲ ಸ್ವಾಗತಿಸಿದರು ಪೆÇ್ರ ಚನ್ನಪ್ಪಗೌಡ ಅವರು ನಿರೂಪಿಸಿದರೆ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ವಂದಿಸಿದರು ಇದೆ ಸಂಧರ್ಭದಲ್ಲಿ ಹಿರಿಯ ರೋಟರಿಯನಗಳಾದ ರೋಟರಿಯನ್ ಡಾ. ಸುರೇಶ ಪಾಟೀಲ್, ರವಿಕಿರಣ್ ಫಬ್ಬಾ, ನರೇಂದ್ರ ಸಾಂಘವಿ, ಗೋಪಾಲ್ ಲೋಯ, ಸುಧಾಕರ್ ಔರಾದ್ಕರ್ ಸಂಗಮೇಶ ಮಾಮಶೆಟ್ಟಿ ಚಂದ್ರಕಾಂತ್ ಕಾಡಾದಿ, ನಾಗೇಂದ್ರ ನಿಟ್ಟೂರೆ, ಭಗವಂತಪ್ಪ ಶ್ರೀನಿವಾಸ್ ಸಾಳೆ, ಅನಿಲಕುಮಾರ್ ಬಿರಾದಾರ ದಾದಾರಾವ್ ಕೊಳೆಕಾರ್ ಮುಂತಾದವರು ಭಾಗವಹಿಸಿದರು