ಗಾಂಧೀಜಿ,ಶಾಸ್ತ್ರೀ ಜಯಂತಿ ಆಚರಣೆ
ಕಲಬುರಗಿ:ಅ.3: ನಗರದ ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಮಹಾತ್ಮಾ ಗಾಂಧಿಜಿಯವರ 155ನೇ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಯವರ 120ನೇ ಜನ್ಮದಿನವನ್ನು ಭಾವಚಿತ್ರದ ಪೂಜೆಯೊಂದಿಗೆ ಆಚರಿಸಲಾಯಿತು.
ಪ್ರಾಂಶುಪಾಲ ಡಾ|| ಭುರ್ಲಿ ಪ್ರಹ್ಲಾದರು ಮಾತಾಡುತ್ತಾ ಗಾಂಧಿಜಿಯವರು ಅಹಿಂಸಾ, ಸತ್ಯದ ಪ್ರತಿಪಾದಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮರು. ಅವರ ಸರಳ ಜೀವನ ನಮಗೆಲ್ಲರಿಗೂ ಮಾದರಿಯಾಗಬೇಕು. ಲಾಲ್ ಬಹದ್ದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಮಾಡಿದ ಸರಳ ವ್ಯಕ್ತಿತ್ವದ ಶಾಂತಿದೂತರಾಗಿದ್ದರು. ಅವರು ಪ್ರದಾನಿಯಾಗಿ ಮಾಡಿದ ಕಾರ್ಯಗಳು ಶ್ಲಾಘನೀಯ.
ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರಕಾಶ ಚವ್ಹಾಣ ಉಪನ್ಯಾಸಕರಾದ ಮಳೇಂದ್ರ ಹಿರೇಮಠ, ಪ್ರಕಾಶ ಕಾಂತೀಕರ್, ನವೀನ ಪಾಟೀಲ, ಅಣವೀರಯ್ಯ ಸ್ವಾಮಿ, ವಂಶಿಕೃಷ್ಣ ಯಾದವ್, ನಿತಿನ್ ಕುಲಕರ್ಣಿ ಹಾಗೂ ಸಿಬ್ಬಂದಿ ಬಳಗ ಉಪಸ್ಥಿತರಿದ್ದರು.