ಮಹಾತ್ಮಾ ಗಾಂಧಿ, ಶಾಸ್ತ್ರೀ ಕೊಡುಗೆ ಅವಿಸ್ಮರಣೀಯ: ಬೆಳಮಗಿ
ಆಳಂದ: ಅ.3:ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದುರ ಶಾಸ್ತ್ರಿ ಇಬ್ಬರೂ ದೇಶಕ್ಕಾಗಿ ಅತ್ಯುತ್ತಮ ಮಾರ್ಗದರ್ಶಕರಾಗಿದ್ದು, ಅವರ ಜೀವನವು ತ್ಯಾಗ, ಶ್ರಮ, ಹಾಗೂ ಶ್ರದ್ಧೆಯನ್ನು ನಮಗೆ ಅವಿಸ್ಮರಣೀಯವಾಗಿದೆ ಎಂದು ನರೋಣಾ ಸರ್ಕಾರಿ ಪಿಯು ಪ್ರಾಚಾರ್ಯಾ ಅಮೃತ ಬೆಳಮಗಿ ಅವರು ಹೇಳಿದರು.
ತಾಲೂಕಿನ ನರೋಣಾ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಚರಿಸಿದ ಮಹಾತ್ಮಗಾಂಧಿ ಜಯಂತಿ ಹಾಗೂ ಲಾಲ್‍ಬಾದ್ದೂರ ಶಾಸ್ತ್ರಿ ಅವರ ಜಯಂತಿ ಮತ್ತು ನೆಹರು ಯುವ ಕೇಂದ್ರ ಕಲಬುರಗಿ, ನರೋಣಾದ ಡಾ. ಅಂಬೇಡ್ಕರ್ ಕ್ರಾಂತಿಕಾರಿ ಯುವಕ ಸಂಘ ಆಶ್ರಯದಲ್ಲಿ ನಡೆದ ಸ್ವಚ್ಛತೆಯ ಸೇವೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹನಿಯರ ಜಯಂತಿಯ ಪ್ರಯುಕ್ತ ಸ್ವಚ್ಛತೆ ಅಭಿಯಾನ ನಡೆಸಿರುವುದು ಮಹತ್ವಪೂರ್ಣವಾಗಿದೆ. ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದಂತೆಯೇ, ಸ್ವಚ್ಛತೆ ಮತ್ತು ಆರೋಗ್ಯದ ಮಹತ್ವವನ್ನು ಸಹ ಒತ್ತಿ ಹೇಳಿದವರು. ಇದೇ ರೀತಿಯ ಚಿಂತನೆಗಳಿಂದ ಇಂದು ನಾವು ಸ್ವಚ್ಛತೆ ಅಭಿಯಾನವನ್ನು ಅಥಪೂರ್ಣವಾಬೇಕಿದೆ. ಗಾಂಧೀಜಿ ಮತ್ತು ಶಾಸ್ತ್ರಿ ಅವರ ತತ್ವಗಳನ್ನು ಪಾಲಿಸುವ ಮೂಲಕ, ಪ್ರತಿ ವ್ಯಕ್ತಿಯು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಮೆಲಿಕೇರಿ ಅವರು ಮಾತನಾಡಿ, ಸ್ವಚ್ಛತೆ ನಮ್ಮ ಎಲ್ಲರ ಜವಾಬ್ದಾರಿಯಾಗಿದೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೆ ಹೇಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸ್ವಚ್ಛತೆ ಅಭಿಯಾನವು ಕೇವಲ ಒಂದು ಕಾರ್ಯಕ್ರಮವμÉ್ಟೀ ಅಲ್ಲ, ಇದೊಂದು ದೈನಂದಿನ ಜೀವನಶೈಲಿ ಆಗಬೇಕು,” ಯುವಕರಿಗೆ ಸಾಮಾಜಿಕ ಜವಾಬ್ದಾರಿ ಅರಿವನ್ನು ಮೂಡಿಸುವುದಾಗಿ, ಈ ರೀತಿಯ ಕಾರ್ಯಕ್ರಮಗಳು ಹೊಸ ಸಂಕಲ್ಪ ಮತ್ತು ಉತ್ಸಾಹವನ್ನು ಹುಟ್ಟಿಸುತ್ತವೆ ಎಂದು ಹೇಳಿದರು.
ಈ ಮೊದಲು ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಅಭಿಯಾನ ಮಾಡಲಾಯಿತು ಪ್ರತಿಜ್ಞಾವಿಧಿ ವಿಧಿಸಲಾಯಿತು. ಕೆಎಸ್‍ಡಿಎಸ್‍ಎಸ್ ತಾಲೂಕ ಸಂಚಾಲಕ ಶಿವಪುತ್ರ ಬಿ. ರಾಗಿ ಶಿಕ್ಷಕ ಬಸವರಾಜ್, ದಲಿತ ಯುವ ಮುಖಂಡ ಕೈಲಾಸ ರಾಗಿ, ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು.