ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು: ಶಾಸಕ ಪುಟ್ಟರಂಗಶೆಟ್ಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.06- ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಬಹಳ ಗೌರವವಿದ್ದು, ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಟವಾದ್ದು, ಅಂಥ ವೃತ್ತಿಯಲ್ಲಿದ್ದ, ಸರ್ವ ಪಲ್ಲಿ ರಾಧಾಕೃಷ್ಟ ಅವರನ್ನು ಎಲ್ಲರಿಗೂ ಮಾರ್ಗದರ್ಶಕರು ಎಂದು ಎಂಎಸ್‍ಐಎಲ್ ಅಧ್ಯಕ್ಷರು ಆದ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.
ನಗರದÀ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅತ್ಯುತ್ತಮ ಶಿಕ್ಷಕರಾಗಿದ್ದರು. ತಮ್ಮ ಬದುಕಿನ ಮೂಲಕ ಶಿಕ್ಷಕ ವೃತ್ತಿಯ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರ ಜೀವನಕ್ರಮ ಶಿಕ್ಷಕರಿಗೆ ಇರುವ ಅಪಾರ ಜವಬ್ದಾರಿಯನ್ನು ಹೇಳುತ್ತದೆ. ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ವೃತ್ತಿ ಧರ್ಮಪಾಲನೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಡಾ. ರಾಧಾಕೃಷ್ಣನ್ ಅವರು ಸಮರ್ಥವಾಗಿ ನಿಭಾಯಿಸುವ ಜೊತೆಗೆ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಬದಲು ಅಂದು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿದ ಮಹಾನ್ ಪುರುಷ ಎಂದು ಬಣ್ಣಿಸಿದರು.
ಇವತ್ತು ನಾವು ಈ ಸ್ಥಾನದಲ್ಲಿದ್ದೇವೆ ಎಂದರೆ ನಮಗೆ ಪಾಠ ಹೇಳಿಕೊಟ್ಟ ಗುರುಗಳು ಕಾರಣರು. ಪ್ರತಿಯೊಬ್ಬರ ಜೀವನದಲ್ಲಿ ಗುರುಗಳು ಇದ್ದೇ ಇರುತ್ತದೆ. ಇಂಥ ವೃತ್ತಿಯಲ್ಲಿರುವ ಶಿಕ್ಷಕರು ಸಮಾಜ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ನಾನು ಸಹ ಶಾಸಕನಾಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿಂತನೆ, ಸಂಶೋಧನೆ, ಬರಹಗಳು ಎಂದಿಗೂ ಶಿಕ್ಷಕರಿಗೆ ಆದರ್ಶವಾಗಿದೆ. ಮಕ್ಕಳಿಗೆ ಮೊದಲ ಗುರು ತಂದೆ-ತಾಯಿಯಾಗಿದ್ದು, ನಂತರ ಶಿಕ್ಷಕರೇ ಗುರು ಸ್ಥಾನವನ್ನು ಸಮರ್ಥವಾಗಿ ತುಂಬುತ್ತಾರೆ. ಶಿಕ್ಷಕರಿಗೆ ಅತ್ಯಂತ ಶೇಷ್ಠ ವೃತ್ತಿ, ಜವಾಬ್ದಾರಿ ಜೊತೆಗೆ ಸಮಾಜದಲ್ಲಿ ಗೌರವ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಿರ್ದೇಶಕ ಆಲೂರು ಪ್ರದೀಪ್, ತಾ.ಪಂ. ಮಾಜಿ ಸದಸ್ಯರಾದ ಎಸ್.ರಾಜು, ಪುಟ್ಟಸ್ವಾಮಿ, ಮುಖಂಡರಾದ ಎಎಚ್‍ಎನ್ ಖಾನ್, ಪಿ.ರಾಜಣ್ಣ, ಕಾಗಲವಾಡಿ ಚಂದ್ರು, ಪುಟ್ಟಸ್ವಾಮಿ, ಅರುಣ್‍ಕುಮಾರ್, ಅಯೂಬ್‍ಖಾನ್, ಕರಿನಂಜನಪುರ ಸ್ವಾಮಿ, ರವಿಗೌಡ, ನಾಗರ್ಜುನಪ್ರಥ್ವಿ, ನಾಗು ಮೋಹನ್, ಮಹದೇವ್, ಡಿ.ಪಿ. ಪ್ರಕಾಶ್, ಮಹದೇವಯ್ಯ, ರೂಪೇಶ್, ದೊಡ್ಡರಾಯಪೇಟೆ ಕುಮಾರ್, ಮರಿಯಾಲ ಮನು ಮೊದಲಾದವರು ಇದ್ದರು.