ನಂಜನಗೂಡು ನಗರಸಭೆ ಕಾಂಗ್ರೆಸ್ ಪಾಲು
ಸಂಜೆವಾಣಿ ವಾರ್ತೆ
ನಂಜನಗೂಡು. ಸೆ.06– ನಂಜನಗೂಡು ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಸಂಸದ ಸುನಿಲ್ ಬೋಸ್ ಚಾಣಾಕ್ಷತನಕ್ಕೆ ಅಧಿಕಾರದ ಗದ್ದುಗೆ ಹಿಡಿಯಲು ಯಶಸ್ವಿಯಾಗಿದ್ದಾರೆ.
ನಂಜನಗೂಡು ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಸಂಖ್ಯೆ ಬಲವನ್ನು ಹೊಂದಿದೆ ಬಿಜೆಪಿ 15 ಕಾಂಗ್ರೆಸ್ 10 ಜೆಡಿಎಸ್ 3 ಪಕ್ಷೇತರ 3 ಸದಸ್ಯರಿರುತ್ತಾರೆ.
ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ನಂಜನಗೂಡಿನಲ್ಲಿ ವಿಫಲವಾಗಿದೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಸದಸ್ಯರ ಒಟ್ಟು ಬಲ 18 ಸದಸ್ಯರು ಇದ್ದರು ನಂಜನಗೂಡು ನಗರ ಸಭೆಯ ಆಡಳಿತದ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿಲ್ಲ ಬಿಜೆಪಿ ಪಕ್ಷದ ನಾಲ್ಕು ಜನ ಸದಸ್ಯರು ಕೈಕೊಟ್ಟ ಕಾರಣ ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದೆಯ ಅಭ್ಯರ್ಥಿಯಾಗಿದ್ದ ಶ್ರೀಕಂಠ ಸ್ವಾಮಿ 16 ಮತಗಳನ್ನು ಪಡೆದು ಅಧ್ಯಕ್ಷರಾದರೆ ಜೆಡಿಎಸ್ ಪಕ್ಷದ ರಿಹಾನ ಬಾನು ಉಪಾಧ್ಯಕ್ಷರಾಗಿ ಆಯ್ಕೆಯಾದರು ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯ ಕ್ಷೇತ್ರವಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಸಂಸದ ಸುನಿಲ್ ಬೋಸ್ ಇಬ್ಬರು ಯುವ ನಾಯಕರ ಚಾಣಾಕ್ಷತನಕ್ಕೆ ಕಮಲ ಮುದುಡಿದೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಂಸದರು ಮತ್ತು ಶಾಸಕರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.
ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ ಮುಂಬರುವ ದಿನಗಳಲ್ಲಿ ನಂಜನಗೂಡು ಧಾರ್ಮಿಕ ಪುಣ್ಯಕ್ಷೇತ್ರ ವಾಗಿರುವ ದೆಸೆಯಿಂದ ಹೆಚ್ಚು ಅಭಿವೃದ್ಧಿಪಡಿಸಲು ನೂತನ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದಾಗುತ್ತಾರೆ ಜೊತೆಗೆ ಶಾಸಕರು ಮತ್ತು ಸಂಸದರಾದ ನಾವು ಸದಾ ಅವರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇವೆ ಇಂದಿನ ಹರಿಕಾರ ಅವಧಿಯಲ್ಲಿ ನಡೆದಿರುವ ಲೋಪದೋಷಗಳ ಬಗ್ಗೆ ಪರಿಶೀಲಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಶಾಸಕ ದರ್ಶನ್ ಮತ್ತು ಸಂಸದ ಸುನಿಲ್ ಸಂದರ್ಭದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾತನಾಡಿ ಸ್ವಚ್ಛತೆಗೆ ಮೊದಲ ಆದ್ಯತೆ 31 ವಾರ್ಡಿಗೂ ಭೇಟಿ ನೀಡಿ ಮೂಲಭೂತ ಸೌಕರ್ಯ ಒದಗಿಸುತ್ತೇನೆ ಪಕ್ಷಬೇಧ ಮರೆತು ಎಲ್ಲ ಸದಸ್ಯರು ಒಳಗೊಂಡಂತೆ ಪ್ರತಿ ವಾರ್ಡಿಗೂ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತೇನೆ ಎಂದರ.
ನೂತನ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮತ್ತು ಉಪಾಧ್ಯಕ್ಷ ರಿಹಾನ ಬಾನು ರವರಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕಿ ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೆಡಿಎಸ್ ಪಕ್ಷದ ಮೂರನೇ ವಾರ್ಡಿನ ಜೆಡಿಎಸ್ ಸದಸ್ಯ ಖಾಲಿದ ಅಹಮದ್ ಬಿಜೆಪಿ ಅಭ್ಯರ್ಥಿ ಜೊತೆ ಗುರುತಿಸಿಕೊಂಡಿದ್ದು ಕಡೆಗಳಿಗೆಯಲ್ಲಿ ಯಾರಿಗೂ ಮತ ಹಾಕದೆ ತಟಸ್ಥವಾಗಿರುವುದು ಎಲ್ಲರೂ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನಗರ ಅಧ್ಯಕ್ಷ ಸಿಎಂ ಶಂಕರ್ ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್ ಉಸ್ತುವಾರಿ ಸೋಮೇಶ್ ಕಾಂಗ್ರೆಸ್ ಪಕ್ಷದ ಸದಸ್ಯರಾದ ಗಂಗಾಧರ ಸಿದ್ದೀಕ್ ಮಹೇಶ್ ಗಾಯಿತ್ರಿ ಉಳಿದ ಸದಸ್ಯರು ಸೇರಿದಂತೆ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.