ಸಿಯುಕೆಯಲ್ಲಿ ಶಿಕ್ಷಕರ ದಿನಾಚರಣೆ
ಕಲಬುರಗಿ:ಸೆ.5:”ಶಿಕ್ಷಕರು ಸಮಾಜದ ಬೆನ್ನೆಲುಬು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ” ಎಂದು ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಅವರು ಮಹಾನ ಶಿಕ್ಷಕ ಮತ್ತು ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ ಅವರ ಜನ್ಮದಿನದ ನೆನಪಿಗಾಗಿ ಸಿಯುಕೆಯಲ್ಲಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ವಿಕಸಿತ ಭಾರತವನ್ನು ಸಾಧಿಸಲು ನಾವು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ನಗರ ಪ್ರದೇಶದ ಎಲ್ಲ ಸೌಲಭ್ಯಗಳು ಹಳ್ಳಿಗಳಲ್ಲಿಯು ಸಿಗಬೇಕು.
ವಿಶ್ವವಿದ್ಯಾಲಯಗಳು ತಮ್ಮ ಸುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಸಿಯುಕೆಯು ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ ನಾವು ನಮ್ಮ ಸುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಕೆಲಸ ಮಾಡಬೇಕು.
ಅದಕ್ಕಾಗಿ ವಿಶ್ವವಿದ್ಯಾಲಯಗಳು ಹೊಸ ಜ್ಞಾನ ಮತ್ತು ಆರ್ಥಿಕ ಮೌಲ್ಯವುಳ್ಳ ಸಂಶೋಧನೆಗಳನ್ನು ಸೃಷ್ಟಿಸಬೇಕು. ಸಮಾಜದ ಸವಾರ್ಂಗೀಣ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ, ನಿರ್ವಹಣೆ, ಮಾನವಿಕ ಮತ್ತು ಸಮಾಜ ವಿಜ್ಞಾನದಂತಹ ಎಲ್ಲಾ ವಿಭಾಗಗಳು ಸಮಾನವಾಗಿ ಮುಖ್ಯವಾಗಿವೆ. ಆದ್ದರಿಂದ ಎಲ್ಲಾ ಶಿಕ್ಷಕರು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಬೇಕು ಮತ್ತು 2047 ರ ವೇಳೆಗೆ ವಿಕಸಿತ ಭಾರತವನ್ನು ಸಾಧಿಸಲು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ರವಿ ಕಾಂಗೈ, ಕಾರ್ಯಕ್ರಮದ ಸಂಯೋಜಕ ಪೆÇ್ರ.ಸತ್ಯನಾರಾಯಣ ಕೂಡ ಮಾತನಾಡಿದರು. ಯುಜಿಸಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಅನಿಲ ಕಾಕೋಡ್ಕರ ಅವರು ಮಾಡಿದ ವಿಶೇಷ ಉಪನ್ಯಾಸವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಪರೀಕ್ಷಾ ನಿಯಂತ್ರಕ ಶ್ರೀ ಕೋಟ ಸಾಯಿಕೃಷ್ಣ, ಹಣಕಾಸು ಅಧಿಕಾರಿ ರಾಮದೊರೈ, ಗ್ರಂಥಪಾಲಕ ಡಾ.ಪರಶುರಾಮ ಕಟ್ಟಿಮನಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಬಸವರಾಜ ಕುಬಕಡ್ಡಿ, ಪೆÇ್ರ.ವಿಕ್ರಂ ವಿಸಾಜಿ, ಪೆÇ್ರ.ಬಿ.ಬಿ.ಪೂಜಾರ ಹಾಗೂ ಎಲ್ಲ ಅಧ್ಯಾಪಕರು ಉಪಸ್ಥಿತರಿದ್ದರು.
ಉಪ-ಕುಲಸಚಿವ ಡಾ.ರವೀಂದ್ರನಾಥ ಪಂಡಿತ ಕಾರ್ಯಕ್ರಮ ನಿರೂಪಿಸಿದರು, ಡಾ.ಗೌರಿಶಂಕರ್ ವಂದಿಸಿದರು. ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ನಾಡಗೀತೆ ಪ್ರಸ್ತುತಪಡಿಸಿದರು.