ಯುವತಿ ಹತ್ಯೆ: ಎಲ್ಲ ಆರೋಪಿಗಳಿಗೆ ಬಂಧಿಸಿ 50 ಲಕ್ಷ ರೂ. ಪರಿಹಾರಕ್ಕೆ ಲಚ್ಚಪ್ಪ ಜಮಾದಾರ್ ಆಗ್ರಹ
ಕಲಬುರಗಿ:ಸೆ.05: ನೆರೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿಯಲ್ಲಿ ಕುಮಾರಿ ಭಾಗ್ಯಶ್ರೀ ಪಂಡಿತ್ ಆಲಗೂಡೆ ಎಂಬ ಯುವತಿಗೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಒಂದು ವಾರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಬಸವಕಲ್ಯಾಣ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಆರು ಜನ ಆರೋಪಿಗಳನ್ನು ಬಂಧಿಸಬೇಕಾಗಿದೆ ಎಂದರು.
ಕಡುಬಡತನದಲ್ಲಿ ವಿದ್ಯಾವಂತೆಯಾಗಿದ್ದ ಯುವತಿಯೊಂದಿಗೆ, ಘೋರ ಕೃತ್ಯಕ್ಕೆ ಬಲಿಯಾಗಿರುವಕುಟುಂಬ ಅಘಾತಕ್ಕೆ ಒಳಗಾಗಿ ಕಣ್ಣೀರಿನ ಕಡಲಿನಲ್ಲಿ ಮುಳಗಿದೆ. ಸರ್ಕಾರ ಈ ಕೂಡಲೇ ಆರೋಪಿಗಳನ್ನು ಕಠಿಣ ಶಿಕ್ಷಕೆಗೆ ಗುರಿಪಡಿಸಿ ಅನ್ಯಾಯಕ್ಕೆ ಒಳಗಾದಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಸದರಿ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸಿ, 50 ಲಕ್ಷ ರೂ.ಗಳ ಪರಿಹಾರ ಕೊಡಬೇಕೆಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಕೋಲಿ ಸಮಾಜದ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಪೋಲಿಸ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ದೂರಿದರು.
ದೇಶದಲ್ಲಿಯೂ ಸಹ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರವು ಅತ್ಯಾಚಾರಿಗಳಿಗೆ ಮರಣದಂಡನೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರವೂ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆದಷ್ಟು ಶೀಘ್ರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೋಲಿ ಸಮಾಜಕ್ಕೆ ಹೆಚ್ಚು ಅನ್ಯಾಯವಾಗುತ್ತಿದೆ ಎಂದು ರಾಜ್ಯ ಸರ್ಕಾರದ ಕುರಿತು ಅಸಮಾಧಾನ ಹೊರಹಾಕಿದ ಅವರು, ಸಮಾಜಕ್ಕೆ ಆಗಿರುವ ಅನ್ಯಾಯವನ್ನು ತಡೆಯದೇ ಹೋದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಲಿಂಗ್ ನಾಟೇಕಾರ್, ಮಲ್ಲಿಕಾರ್ಜುನ್ ಗುಡಬಾ, ಪಿಂಟು ಜಮಾದಾರ್, ಭೀಮಶಾ ಖನ್ನಾ, ದೇವಿಂದ್ರ ಜಮಾದಾರ್, ಅರುಣಕುಮಾರ್ ಇನಾಂದಾರ್, ಅಂಬಾರಾಯ್ ಜವಳಗಾ, ಶಿವು ಧಣಿ, ದೇವಿಂದ್ರ ಜಮಾದಾರ್, ಸತೀಶ್ ಜಮಾದಾರ್, ವೈಜನಾಥ್ ಕಟ್ಟಳ್ಳಿ, ಗುರು ಕರಾಟೆ, ರಾಮು ಉಮ್ಮರ್ಗಿ, ವಿಜಯಕುಮಾರ್ ಜಮಾದಾರ್, ಮಲ್ಲು ಮೇದಾರ್, ರಾಜು ಮಾತೋಳಿ, ಅರುಣಕುಮಾರ್ ಇನಾಂದಾರ್, ಗೌತಮ್ ಉಪಾಧ್ಯಾಯ, ದೌಲತರಾಯ್ ಬಬಲಾದ್ ಮುಂತಾದವರು ಉಪಸ್ಥಿತರಿದ್ದರು.