ಸೆ. 8 ಹಾಗೂ 9 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಸೆ.05:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯಿಂದ ನೀರು ಸರಬರಾಜಾಗುವ ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಫರಹತಾಬಾದ ಹಾಗೂ ಸೀತನೂರ ಹತ್ತಿರದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಕೊಟನೂರ ಹಾಗೂ ಶೋರಗುಂಬಜ್ ನೀರು ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಇದೇ ಸೆಪ್ಟೆಂಬರ್ 8 ಹಾಗೂ 9 ರಂದು ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರದ ಬಿದ್ದಾಪೂರ, ರಾಯರಗುಡ್ಡಿ, ವಿಶಾಲನಗರ, ಅಂಭಿಕಾ ನಗರ, ಪಿಂಪ್ಲಿ ಟೆಂಪಲ್, ಪಿ ಆಂಡ್ ಟಿ ಕಾಲೋನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ್‍ನಗರ, ಬನಶಂಕರಿ ನಗರ, ಹರಿನಗರ, ಗಾಭರೆ ಲೇಔಟ್, ಜೆಂ ಶೇಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್‍ಜಿಓ ಕಾಲೋನಿ, ಜೇವರ್ಗಿ ಕಾಲೋನಿ, ಮಾಕಾ ಲೇಔಟ್, ಸಂತೋಷ ಕಾಲೋನಿ, ಪಿಡಬ್ಲ್ಯೂಡಿ ಕಾಲೋನಿ, ಬ್ಯಾಂಕ್ ಕಾಲೋನಿ, ಬಾಲಾಜಿ ನಗರ, ರಹೆಮತ್ ನಗರ, ಸಂಪಿಗೆ ನಗರ, ಬುದ್ಧನಗರ, ರೇವಣಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಓಝಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೋನಿ, ಸಿಐಬಿ ಕಾಲೋನಿ, ಶಕ್ತಿ ನಗರ, ಸ್ಟೇಷನ್ ಬಜಾರ, ಐವಾನ್ ಶಾಹಿ, ಯತೀಮಖಾನಾ, ಶಾಂತಿ ನಗರ, ವಿಠ್ಠಲನಗರ, ಖುಬಾ ಪ್ಲಾಟ್, ಮಿಸಬಾ ನಗರ, ಅಜ್ಮೆರ್ ಕಾಲೋನಿ, ಕರಿಮ ನಗರ, ಗಾಲಿಫ್ ಕಾಲೋನಿ, ಮಹಮ್ಮದ ಚೌಕ್, ಖಾದಿಲ್ ಚೌಕ್, ಶಿವನಗರ, ಸಿದ್ಧರಾಮೇಶ್ವರ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕೈಲಾಸ ನಗರ, ಜಿ.ಆರ್. ನಗರ, ಕಸ್ತೂರಿ ನಗರ, ಆಶ್ರಯ ಕಾಲೋನಿ, ಪೂಜಾ ಕಾಲೋನಿ, ಜಾಗೃತಿ ಕಾಲೋನಿ, ಓಂ ನಗರ, ಜಂಜಂ ಕಾಲೋನಿ, ಜುಬೈರ್ ಕಾಲೋನಿ, ಅಜಾದಪೂರ ಕಾಲೋನಿ, ನಾಯ್ಡು ಕಾಲೋನಿ ಹಾಗೂ ಮಿನಿ ಅಮ್ಮಲವಾಡಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಲಬುರಗಿ ನಗರದ ಸಾರ್ವಜನಿಕರು ಮಹಾನಗರ ಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕೆಯುಐಡಿಎಫ್‍ಸಿ, ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.