ನಿವೃತ್ತ ಆದರ್ಶ ಶಿಕ್ಷಕ ವೆಂಕಟೇಶ ಕುಲಕರ್ಣಿಗೆ ಗೌರವ
ಕಲಬುರಗಿ:ಸೆ.05: ಆಳಂದ ತಾಲೂಕಿನ ನರೋಣಾ ಸರ್ಕಾರಿ ಪ್ರೌಢಶಾಲೆಯಲ್ಲಿ 37 ವರ್ಷಗಳ ಸುದೀರ್ಘ ಹಾಗೂ ಮಾದರಿಯಾಗಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟ ಅಪರೂಪದ ಗುರುಗಳಾದ ವೆಂಕಟೇಶ ಕುಲಕರ್ಣಿ ಅವರಿಗೆ ಹಳೆಯ ವಿದ್ಯಾರ್ಥಿಗಳಿಂದ ನಗರದ ಧನಗರ ಗಲ್ಲಿಯ ಅವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸತ್ಕರಿಸಿ, ಆಶೀರ್ವಾದ ಪಡೆಯಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಎಚ್.ಬಿ.ಪಾಟೀಲ, ವೀರೇಶ ಬೋಳಶೆಟ್ಟಿ, ಶಿವಾನಂದ ವಾಲಿ, ಬಸವರಾಜ ಸಂಗೋಳಗಿ, ಲಿಂಗರಾಜ ವಾಲಿ,
ದಯಾನಂದ ಕಮಲಾಪುರ, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.