ಹಣ ಜಮೆ ಮಾಡದೆ ವಂಚನೆ: ಅಂಚೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
ಕಲಬುರಗಿ,ಸೆ.5-ಗ್ರಾಹಕರೊಬ್ಬರ ಖಾತೆಗೆ ಹಣ ಜಮೆ ಮಾಡದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಡಗಿಲ್ ಹಾರುತಿ ಪೋಸ್ಟ್ ಆಫೀಸ್ ಅಧಿಕಾರಿ ಎಂ.ರಾಮೇಶ್ವರಿ ಅವರ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಉಪ ವಿಭಾಗ-ರ ಸಹಾಯಕ ಅಂಚೆ ಅಧೀಕ್ಷಕ ಲಕ್ಷ್ಮೀಕಾಂತ ಎಸ್.ಕೋಡ್ಲಿ ಅವರು ದೂರು ಸಲ್ಲಿಸಿದ್ದು, ಅಂಚೆ ಕಚೇರಿಗೆ ವಂಚನೆ ಮಾಡಿ ಹಣ ದುರ್ಬಳಕೆ ಮಾಡಿದ ಎಂ.ರಾಮೇಶ್ವರಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.