ಪೊಲೀಸ್ ಪೇದೆಗೆ 1.75 ಲಕ್ಷ ರೂ.ಸೈಬರ್ ವಂಚನೆ
ಕಲಬುರಗಿ,ಸೆ.5-ಎಪಿಕೆ ಫೈಲ್ ಮುಖಾಂತರ ಪೊಲೀಸ್ ಪೇದೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿರುವ ಸೈಬರ್ ವಂಚಕರು ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1.75 ಲಕ್ಷ ರೂಪಾಯಿ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಡಿಎಆರ್ ಪೊಲೀಸ್ ಆಗಿರುವ ಸಿದ್ದಪ್ಪ ಗೋಡಿಹಾಳ ಎಂಬುವವರೆ ವಂಚನೆಗೆ ಒಳಗಾಗಿದ್ದಾರೆ.
ಸೈಬರ್ ವಂಚಕರು ಎಪಿಕೆ ಫೈಲ್ ಮುಖಾಂತರ ಸಿದ್ದಪ್ಪ ಅವರ ಮೊಬೈಲ್ ಹ್ಯಾಕ್ ಮಾಡಿ ಇವರ ಮೊಬೈಲ್ ನಂಬರ್‍ಗೆ ಬರುವ ಎಸ್‍ಎಂಎಸ್‍ಗಳನ್ನು ತಮ್ಮ ಮೊಬೈಲ್‍ಗೆ ಫಾರ್ವರ್ಡ್ ಆಗುವಂತೆ ಮಾಡಿದ್ದಾರೆ. ನಂತರ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1.75 ಲಕ್ಷ ರೂ.ಗಳನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.
ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.