ಮಟಕಾ ಬುಕ್ಕಿಗೆ 3 ತಿಂಗಳು ಜೈಲುಶಿಕ್ಷೆ
ಕಲಬುರಗಿ,ಸೆ 5: ಸಾರ್ವಜನಿಕರಿಂದÀ ಹಣ ಪಡೆದು 1 ಕ್ಕೆ 80 ಪಟ್ಟು ಹಣ ನೀಡುವದಾಗಿ ಹೇಳಿ ಮಟಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದ ನಗರದ ವ್ಯಕ್ತಿಯೊಬ್ಬನಿಗೆ ಇಲ್ಲಿನ 3 ನೇ ಜೆಎಂಎಫ್‍ಸಿ ನ್ಯಾಯಾಲಯ 3 ತಿಂಗಳು ಸಾದಾ ಜೈಲುಶಿಕ್ಷೆ ನೀಡಿದೆ.
ರಾಜಶೇಖರ ಮಲ್ಲಿಕಾರ್ಜುನ ಉಮಾಶೆಟ್ಟಿ ಶಿಕ್ಷೆಗೊಳಗಾದ ವ್ಯಕ್ತಿ.ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿ ಕಾಲೋನಿ ಕೆಇಬಿ ಕಚೇರಿ ಬಳಿ 2021 ರ ಏಪ್ರಿಲ್ 1 ರಂದು ಈತ ಮಟಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದಿದ್ದ.ಪೊಲೀಸರು ಈತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3 ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರ ಸಾಬ ಅಬ್ದುಲ ರಜಾಕ ಮುಲ್ಲಾ ಅವರು ಶಿಕ್ಷೆ ಪ್ರಕಟಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪಾ ಅವರು ವಾದ ಮಂಡಿಸಿದ್ದರು.