ನಾಳೆ  ಬಳ್ಳಾರಿ ವಿವಿ ಘಟಿಕೋತ್ಸವಉಮಾಶ್ರೀ, ಮೋದಿ, ಚಂದ್ರಮೌಳೇಶ್ವರ ಶ್ರೀಗೆ ಗೌರವ ಡಾಕ್ಟರೇಟ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05: ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ 12 ನೇ ಘಟಿಕೋತ್ಸವ ನಾಳೆ  ನಡೆಯಲಿದ್ದು. ರಂಗಭೂಮಿ, ಕಲೆ ಮತ್ತು  ಸಮಾಜ ಸೇವೆಗೆ ನಟಿ ಉಮಾಶ್ರೀ, ಕೈಗಾರಿಕೆ ಮತ್ತು ಸಮಾಜ ಸೇವೆಗೆ ಉದ್ಯಮಿ ದಿ.ಎಸ್.ಕೆ.ಮೋದಿ ಹಾಗು ಮಠಾಧೀಶರಾಗಿ ಶಿಕ್ಷಣ ಸೇವೆ ಮಾಡುತ್ತಿರುವ  ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆಂದು  ವಿವಿಯ ನೂತನ ಕುಲಪತಿ ಪ್ರೊ. ಎಂ.ಮುನಿರಾಜು ತಿಳಿಸಿದ್ದಾರೆ.
ಅವರು ಇಂದು ವಿವಿಯಲ್ಲಿ ಸುದ್ದಿಗೋಷ್ಟಿ ನಡೆಸಿ. ವಿವಿ ಬಯಲುರಂಗ ಮಂದಿರದಲ್ಲಿ ನಾಳೆ ಮಧ್ಯಾಹ್ನ 12.30 ಕ್ಕೆ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ವಹಿಸಿ.ಗೌರವ ಡಾಕ್ಟರೇಟ್ ಒದವಿ ಮತ್ತು ಪಿಹೆಚ್‌ಡಿ ಪದವಿ ಪ್ರದಾನ ಮಾಡಲಿದ್ದಾರೆ. ಧಾರವಾಡದ ಐಐಟಿಯ ಪ್ರೋ.ಎಸ್‌ಎಂ. ಶಿವಪ್ರಸಾದ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.
ಘಟಿಕೋತ್ಸವದ ವಿಶೇಷತೆಗಳು:
ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕ ಪಡೆದಿದ್ದಾರೆ. ವಿವಿಧ ವಿಭಾಗಗಳ ಒಟ್ಟು 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 56 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 69 ಒಟ್ಟು 125 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆಮನದು ತಿಳಿಸಿದರು.
ಫಲಿತಾಂಶ:
ವಿಶ್ವವಿದ್ಯಾಲಯದಲ್ಲಿ ಈ ವರ್ಷ 13,339 ಜನ ವಿದ್ಯಾರ್ಥಿಗಳು  ಸ್ನಾತಕ ಪದವಿಪದವಿ ಪಡೆದಿದ್ದರೆ ಸ್ನಾತಕೋತ್ತರ ಪದವಿಯಲ್ಲಿ 1,733 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಕುಲಸಚಿವರಾದ ಎಸ್.ಎಂ.ರುದ್ರೇಶ್, ರಮೇಶ್ ಓಲೇಕಾರ್ ಇದ್ದರು.
7 ಜನ ಅರ್ಜಿ ಸಲ್ಲಿಸಿದ್ದರು:
ಗೌರವ ಡಾಕ್ಟರೇಟ್ ನೀಡುವಂತೆ ಸ್ವರಃ ಕೆಲವರು ತಾವೇ ಮತ್ತು ಕೆಲವರ ಪರವಾಗಿ ಮತ್ತೊಬ್ಬರು ಅರ್ಜಿ ಸಲ್ಲಿಸಿದ್ದರು.  ಅವರಲ್ಲಿ ದಿ. ಬೆಳಗಲ್ಲು ವೀರಣ್ಣ, ವೀ.ವೀ.ಸಂಘದ ಮಾಜಿ ಕಾರ್ಯದರ್ಶಿ  ಚೊರನೂರು ಟಿ.ಕೊಟ್ರಪ್ಪ,  ಚೆನ್ನಪ್ಪ ತಳವಾರ್, ರಂಗನಟಿ ಪದ್ಮಾವತಿ ಕೂಡ್ಲಿಗಿ, ಕೊಟ್ಟೂರಿನವರಾದ  ವಿಜ್ಞಾನಿ ದಾರುಕೇಶ್ , ಉದ್ಯಮಿ ಎಸ್.ಕೆ.ಮೋದಿ ಹಾಗು ತೆಗ್ಗಿನ ಮಠದ ಶ್ರೀಗಳ ಹೆಸರು ಇತ್ತು. ಇವರಲ್ಲಿ
ಬೆಳಗಲ್ಲು ವೀರಣ್ಣ ಮತ್ತು ಇಸ್ರೋ ವಿಜ್ಞಾನಿ ದಾರುಕೇಶ್ ಅವರನ್ನು ಬಿಟ್ಟು ಉಳಿದ ಐದು ಜನರ ಹೆಸರನ್ನು ಸಿಂಡಿಕೇಟ್ ನಿರ್ಣಯ ತೆಗೆದುಕೊಂಡು ರಾಜ್ಯಪಾಲರ ಕಚೇರಿಗೆ ಕಳಿಸಿತ್ತು. ಅವರಲ್ಲಿ ಮೂವರನ್ನು ಅಯ್ಕೆ ಮಾಡಿದೆ.
ನಾಳೆ ನೀಡಲಿದೆ:
ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಪಿಹೆಚ್‌ಡಿ ಪದವಿ ಪಡೆದ ಕೆಲ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿ ಮಿಸ್ ಆಗಿರುವ ಬಗ್ಗೆ ಒಪ್ಪಿಕೊಂಡ ಕುಲಪತಿಗಳು ಅಂತಹವರಿಗೆ ನಾಳೆ ನೀಡುವುದಾಗಿ ತಿಳಿಸಿದ್ದಾರೆ.
ಮೂರು ತಿಂಗಳು ಹಿಂದೆ ಇದೆ.
ವಿವಿಯು ಇತರೇ ವಿವಿಗಳಿಗೆ ಹೋಲಿಸಿದರೆ ಅಕಾಡೆಮಿಕ್ ಆಗಿ ಮೂರು ತಿಂಗಳು ಹಿಂದೆ ಇದೆ. ಅದಕ್ಕಾಗಿ ಎಲ್ಲಾ ಕಾಲೇಜುಗಳ ಸಭೆ ನಡೆಸಿ ತ್ವರಿತಗತಿಯಲ್ಲಿ  ಭೋಧನೆ ಮತ್ತು ಪರೀಕ್ಷೆ ಮುಗಿಸಲು ಸೂಚಿಸಿದೆಂದು ಕುಲಪತಿಗಳು ತಿಳಿಸಿದರು.
ರಾಜ್ಯಪಾಲರು ಬರಲ್ಲ:
ನಾಳೆ ನಡೆಯುವ ಘಟಿಕೋತ್ಸವ ಸಮಾರಂಭಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಅವರ ಪ್ರವಾಸ ರದ್ದಾಗಿದೆ.