36 ನೇ ವಾರ್ಡಿನ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
(ಸಂಜೆವಾಣಿ ವಾರ್ತೆ)
.ಬಳ್ಳಾರಿ, ಸೆ.05; ಮಹಾನಗರದ 36ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಯಿಂದ ಶಿಕ್ಷಕರ ದಿನಾಚರಣೆಯನ್ನು ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ಶಾಲೆಯ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸಿ ಶಿಕ್ಷಕ ಸಿಬ್ಬಂದಿ ವರ್ಗಕ್ಕೆ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಕುರಿತು ದತ್ತಾತ್ರೇಯ ಹಾಗೂ ರಾಜಶೇಖರ್  ತಿಳಿಸಿದರು.
ಎಸ್ಡಿಎಂಸಿ ವೇದಿಕೆಯ ಜಿಲ್ಲಾಧ್ಯಕ್ಷ ಜೆ. ವಿ. ಮಂಜುನಾಥ್ ಮಾತನಾಡಿ, ಈ ಪ್ರಪಂಚದಲ್ಲಿ ಯಾವುದಾದರೂ ಒಂದು ಆತ್ಮತೃಪ್ತಿಯ ಕೆಲಸವಿದ್ದರೆ ಅದು ಶಿಕ್ಷಕ ವೃತ್ತಿ ಎಂದು ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಎಲ್ಲಾ ತಂದೆ ತಾಯಂದಿರ ಹಾಗೂ ಪೋಷಕರ ಪರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳಾದ  ಬಸವರಾಜ್ ಇಂದಿರಾ ಛಾಯಾ ದುರ್ಗಮ್ಮ ಸುಜಾತ ಹಾಗೂ ಅಡುಗೆ ಸಿಬ್ಬಂದಿ ವರ್ಗದವರಾದ ಕವಿತಾ  ಭುವಮ್ಮ  ಶಿವಮ್ಮ ಮತ್ತು ಕೆಲ ಪೋಷಕರು  ಇದ್ದರು.