ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಆಯೋಜನೆ: ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಬೀದರ್: ಸೆ.5:ನಗರದ ನೌಬಾದನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪ್ರೌಢ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ರಸ ಪ್ರಶ್ನೆ ಕಾರ್ಯಕ್ರಮಕ್ಕೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ|| ದೀಲಿಪ ಡೋಂಗ್ರೆ ಗಿಡಕ್ಕೆ ನೀರು ಉಣ್ಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಸೂರ್ಯಕಾಂತ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಡ್ಯಾಪ್ಕು ಬೀದರರವರು ಪ್ರೌಢ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೆಚ್.ಐ.ವಿ ಏಡ್ಸ್ ಕುರಿತು ಮೂಲ ಮಾಹಿತಿ ಮತ್ತು ಸ್ವಯಂ ಪ್ರೇರಿತ ರಕ್ತದಾನದ ಮಹತ್ವದ ಕುರಿತು ಮಾತನಾಡಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ: ಕರಡ್ಯಾಳ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿ ವೇದಿಕಾ ಮತ್ತು ರುದ್ರಾಕ್ಷ ಇವರಿಗೆ ಮೊದಲನೆ ಬಹುಮಾನ 6000 ರೂ., ವಡಗಾಂವ ಸರಕಾರಿ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶಾಮಸಿಂಗ ಮತ್ತು ಮಾರ್ಟಿನ ಇವರಿಗೆ ಎರಡನೇ ಬಹುಮಾನ 5000 ರೂ. ಹಾಗೂ ಸಂತಪೂರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬಸವಕಿರಣ ಮತ್ತು ಹರಿಪ್ರಸಾದ ಇವರಿಗೆ ತೃತೀಯ ಬಹುಮಾನ 4000 ರೂ. ಹಾಗೂ ಗೌರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತೇಜಸ್ ಹಾಗೂ ರೀತಿಕಾ ಇವರಿಗೆ ಸಮಾಧಾನಕರ ಬಹುಮಾನ 3000 ರೂ. ಸೇರಿದಂತೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 40 ಶಾಲೆಯ 90 ವಿದ್ಯಾರ್ಥಿ-ವಿದ್ಯಾರ್ಥಿನಿಯರುವ ಪಾಲ್ಗೊಂಡಿದರು.
ಈ ಸಂದರ್ಭದಲ್ಲಿ ಹುಡಗೆ ಗುಂಡಪ್ಪಾ, ಎ.ಪಿ.ಸಿ ಮತ್ತು ಶಿಕ್ಷಾಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಬೀದರ, ಅತಿಥಿಗಳಾಗಿ ಬಲವಂತರಾವ ರಾಠೋಡ, ಸಹಾಯಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಮರಕಲ್, ಸುಮಂಗಲಾ, ಸಹಾಯಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಗೌರ, ಚಂದ್ರಕಾಂತ ಕೊಳ್ಳಿ, ಸಹಾಯಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸಂತಪೂರ, ಸಂಪೂರ್ಣಾನಂದ ಸಹಾಯಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕಪಲಾಪೂರ, ಸೂರ್ಯಕಾಂತ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಡ್ಯಾಪ್ಕು ಬೀದರ, ಸಂಜಯಕುಮಾರ ಎಂ & ಇ ಸಹಾಯಕರು ಡ್ಯಾಪ್ಕು ಬೀದರರವರು ವಂದನಾರ್ಪಣೆಯನ್ನು ಮಾಡಿದರು. ಮತ್ತು ಕಾರ್ಯಕ್ರಮದಲ್ಲಿ ಡೈಟ್ ಸಂಸ್ಥೆಯ ಸಿಬ್ಬಂದಿಯವರು, ಡ್ಯಾಪ್ಕು ಸಿಬ್ಬಂದಿಯವರು ಪಾಲ್ಗೊಂಡಿದರು.