ಸಂಜೆ ದರ್ಶನ್ ಭೇಟಿಗೆ ವಿಜಯಲಕ್ಷ್ಮಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್  ಪತ್ನಿ ವಿಜಯಲಕ್ಷ್ಮಿ ಪತಿ ದರ್ಶನ್ ಅವರನ್ನು ಇಂದು ಸಂಜೆ ಭೇಟಿ ಮಾಡಲು ಬಳ್ಳಿಗೆ  ಬರುತ್ತಿದ್ದಾರಂತೆ.
ಸಂಜೆ 4.30 ರಿಂದ 5.30ರವರೆಗೆ ಸಂದರ್ಶಕರ ಭೇಟಿಯ ಸಮಯವಿರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿ ಮಾಡುವುದಾಗಿ ಜೈಲು ಸಿಬ್ಬಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರಂತೆ.
ನಿಯಮಗಳ ಪ್ರಕಾರ ಒಬ್ಬ ಕೈದಿ ಆರ್ಧ ಗಂಟೆ ಸಂಬಂಧಿಕರ ಜೊತೆಗೆ ಮಾತನಾಡಬಹುದು.
ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ಈಗ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ವಿಜಯಲಕ್ಷ್ಮಿ ಜೊತೆಗೆ ವಕೀಲರು ಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.