ಶಿಥಿಲಗೊಂಡ ಅಂಗನವಾಡಿ ಕಟ್ಟಡ: ಮಕ್ಕಳ ಜೀವಕ್ಕೆ ಕುತ್ತು
(ನಾಗರಾಜ ಕುಂಬಾರ)
ಕೊಲ್ಹಾರ:ಸೆ.5: ಪಟ್ಟಣದ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಪೆÇೀಷಕರು ಮಕ್ಕಳನ್ನು ಕಳುಸಲು ಆತಂಕ ಪಡುವಂತಾಗಿದು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೂ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಗಮನ ನೀಡದಿರುವುದು ಸರಿಯಲ್ಲ.ಕಟ್ಟಡಕುಸಿದು ಅವಘಡ ಸಂಭವಿಸಿದರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಭೀಮ್ ಆರ್ಮಿ ಕರ್ನಾಟಕ ಏಕ್ತಾ ಮಿಷನ ಕೊಲ್ಹಾರ ಗೌರವ ಅಧ್ಯಕ್ಷ ಮಾರುತಿ ಕುದಿರಿ ಆರೋಪಿಸಿದ್ದಾರೆ
ವಾರ್ಡ್ ನಂಬರ್ 12ರಲ್ಲಿ ಇರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಗಾರೆ ಕಿತ್ತು ಬೀಳುತ್ತಿದ್ದು, ಕಬ್ಬಿಣದ ಸರಳು ಹೊರಗೆ ಕಾಣುತ್ತಿವೆ. ಅಂಗನವಾಡಿ ಕೇಂದ್ರದಲ್ಲಿ ಸುಮಾರು 19 ಮಕ್ಕಳು ಇದ್ದು ಈ ಮಕ್ಕಳಿಗೆ ಯಾವುದೇ ಅಗತ್ಯ ಸೌಲಭ್ಯಗಳು ಇಲ್ಲಿ ಇಲ್ಲ. ಕಟ್ಟಡ ಶಿಥಿಲಗೊಂಡಿದ್ದು ಇದರಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗಿದೆ. ಈ ವ್ಯಾಪ್ತಿಯಲ್ಲಿ ಬಡಮಕ್ಕಳಿದ್ದು, ಅನಿವಾರ್ಯವಾಗಿ ಅಲ್ಲೆ? ಅಂಗಳದಲ್ಲಿ ಕುಳಿತು ಕಲಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಸುತ್ತಲೂ ಆವರಿಸಿದ ಗಿಡಗಂಟಿಗಳು. ಇದರ ನಡುವೆ ವಿಷಜಂತುಗಳು ಯಾವಾಗ ಬಂದು ಬಿಡುತ್ತವೋ ಎಂಬ ಭಯದಲ್ಲಿ ಮಕ್ಕಳು ಕುಳಿತುಕೊಳ್ಳುವಂತಾಗಿದೆ.
ಅಂಗನವಾಡಿ ಕೇಂದ್ರವು ಶಿಥಿಲಗೊಂಡ ಕಟ್ಟಡದಲ್ಲೇ ನಡೆಯುತ್ತಿದ್ದರೂ ಮಕ್ಕಳ ಬಗ್ಗೆ ಕಾಳಜಿವಹಿಸದೇ ಮೌನವಹಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ