ಯುವತಿ ಕೊಲೆ : ಮೂವರು ಆರೋಪಿಗಳ ಬಂಧನ
ಬಸವಕಲ್ಯಾಣ: ಸೆ.5:ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಭದಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ನಗರ ಪೆÇೀಲಿಸರ ತಂಡ ಯಶಸ್ವಿಯಾಗಿದೆ.
ಗುಣತಿರ್ಥವಾಡಿಯ ನಿವಾಸಿ ರಾಜೇಶ ಮಾಳಿ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಭಾನುವಾರ ಬಸವಕಲ್ಯಾಣ ತಾಲೂಕಿನ ಗುಣತಿರ್ಥವಾಡಿ ಗ್ರಾಮದ ಬಳಿ 18 ವರ್ಷದ ಯುವತಿ ಕೊಲೆಯಾದ ರೀತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಭದಿಸಿದಂತೆ ನಗರ ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡ ಪೆÇೀಲಿಸರ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ ಕೊಲೆ ಮಾಡಿದ ಪ್ರಮುಖ ಆರೋಪಿ ಹಾಗೂ ಕೊಲೆಗೆ ಸಹಕರಿಸಿದ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದ ಇತನ ಇಬ್ಬರು ಸ್ನೇಹಿತರು ಸೇರಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಪೆÇೀಲಿಸರ ತಂಡ ಯಶಸ್ವಿಯಾಗಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ 18 ವರ್ಷದ ಯುವತಿಯೊಂದಿಗೆ ಪ್ರಮುಖ ಆರೋಪಿ ಕಳೆದ ಕೆಲದಿನಗಳಿಂದ ಪ್ರೀತಿ ಪ್ರೇಮದ ನಾಟಕವಾಡಿ ಆಕೆಯನ್ನು ದುರುದ್ದೇಶಕ್ಕೆ ಬಳಸಿಕೊಂಡಿದ್ದ ಹೀಗಾಗಿ ಮದುವೆ ಯಾಗುವಂತೆ ಇತನನ್ನು ಪಿಡಿಸುತ್ತಿದ್ದಳು. ಇದರಿಂದ ಕೋಪಗೊಂಡ ಆರೋಪಿ ಕಳೆದ ಆಗಷ್ಟ 28 ರಂದು ಮಧ್ಯರಾತ್ರಿ ಮನೆಯಿಂದ ಕರೆಯಿಸಿ ಕೊಂಡು ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಮುಳ್ಳಿನ ಪೆÇದೆಯಲ್ಲಿ ಅತ್ಯಚಾರ ನಡೆಸಿದ ನಂತರ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿ ನಾಪತ್ತೆಯಾಗಿದ್ದ. ಮೂರು ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ವಿವಸ್ತ್ರವಾಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೆÇಲಿಸರ ತಂಡ ಎಸ್.ಪಿ. ಪ್ರದೀಪ ಗುಂಟಿ, ಎ.ಎಸ್.ಪಿ ಮಹೇಶ ಮೆಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಜೆ.ಎಸ್.ನ್ಯಾಮೆಗಾಡ, ಶಿವಾನಂದ ಪಾವಡಶೆಟ್ಟಿ ಮಾರ್ಗದರ್ಶನಲ್ಲಿ ಸಿಪಿಐಗಳಾದ ಅಲಿಸಾಬ್, ಕೃಷ್ಣಕುಮಾರ ಪಾಟೀಲ ನೇತೃತ್ವದಲ್ಲಿ ಪಿಎಸ್‍ಐ ಅಂಬರೀಷ ವಾಗಮೊಡೆ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬುಧುವಾರ ಬಂಧಿಸಿ ಜೈಲಿಗೆ ಕಳುಹಿಸಲು ಯಶ್ವಸ್ವಿಯಾಗಿದೆ.