ನೈತಿಕತೆಯೇ ‘ಸ್ವಾತಂತ್ರ್ಯದ ಭರವಸೆ’ ರಾಷ್ಟ್ರವ್ಯಾಪಿ ಅಭಿಯಾನ: ತಸ್ಕಿಲಾ ಖಾನಂ
ಬೀದರ್: ಸೆ.5:ಈ ತಿಂಗಳ 1ರಿಂದ 30ರ ವರೆಗೆ ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ವಿಚಾರ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಸ್ಕಿಲಾ ಖಾನಮ್ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ದೇಶ ಸ್ವಾತಂತ್ರ್ಯವಾಗಿ 78 ವರ್ಷಗಳು ಗತಿಸಿದರೂ ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ಅರಿಯಲು ವಿಫಲರಾಗಿದ್ದೇವೆ. ಪಾಶ್ಚಿಮಾತ್ಯ ರಾಷ್ಟ್ರಗಳ ಅನುಸರಣೆಗೆ ಒಳಗಾಗಿ ಇಂದು ನಮ್ಮ ಬದುಕಿನ ಶೈಲಿ ಬದಲಾವಣೆ ಆಗಿ ನಮ್ಮ ಅಸಲಿ ಜೀವನ ವಿಧಾನವನ್ನೇ ಮರೆತಿದ್ದೇವೆ. ಇದರಿಂದ ಸಮಾಜದಲ್ಲಿ ಅತ್ಯಾಚಾರ, ಕೊಲೆ, ಶೋಷಣೆ, ವಂಚನೆ, ವೆಭಿಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ಗ ಮಹಿಳಾ ವಿಭಾಗವು ಈ ಅಭಿಯಾನದ ಮೂಲಕ ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆ, ನೈತಿಕ ಕಟ್ಟಳೆಗಳನ್ನು ಪಾಲಿಸುವುದರಿಂದಲೇ ಸಾಧ್ಯ ಎಂಬ ಪ್ರಜ್ಞೆ ಬೆಳೆಸುವ ಸಂಕಲ್ಪವ ತೊಟ್ಟಿದೆ ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ವಿಶೇಷತ ಮುಸ್ಲಿಂ ಸಮುದಾಯದಲ್ಲಿ ಕುರಾನ್ ಮತ್ತು ಸುನ್ನತ್‍ನ ಬೆಳಕಿನಲ್ಲಿ ಇಸ್ಲಾಮಿನ ಸರಿಯಾದ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕ ಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನ ಹರಿಸಲಾಗುವುದು. ಈ ಮೂಲಕ ಒಂದೆಡೆ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮೆಚ್ಚುವಂತಹ ಜೀವನ ಸಾಗಿಸುವ ಮೂಲಕ ಯಶಸ್ಸನ್ನು ಗಳಿಸುವುದು ಹಾಗೂ ಸಮಾಜಕ್ಕಾಗಿ ಒಂದು ಅತ್ಯುತ್ತಮ ಮಾದರಿಯಾಗುವುದು ಎಂದು ತಸ್ಕಿಲಾ ಖಾನಂ ತಿಳಿಸಿದರು.
ಶಾಹಿನ್ ಕಾಲೇಜಿನ ಪ್ರಾಚಾರ್ಯೆ ಅಫ್ರನಾಜ್ ಮಾತನಾಡಿ, ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸಮಾನತೆ ಮತ್ತು ಸ್ವಾತಂತ್ರ್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಟುಕ್, ಇನ್ನಾ ಗ್ರಾಮ್ ದಂತಾದಮ ಸಾಮಾಜಿಕ ಜಾಲತಾಣಗಳ ಮೂಲಕ ಮನಮೊಹಲ್ಲಗಳು ಮಾತ್ರವಲ್ಲ ಎಲ್ಲ ಕಡೆಗಳಲ್ಲೂ ಅಶ್ಲೀಲತೆಯು ಸಾಮಾನ್ಯವಾಗಿ ಬಿಟ್ಟಿದೆ ಎಂದವರು ಹೇಳಿದರು.
ಇಂದು ಹೆಚ್ಚುತ್ತಿರುವ ನಗ್ನತೆ, ಜೂಜು, ಮಧ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನ ಲಿವಿಂಗ್ರಿಲೇಶನ್ಶಿಪ್ ಸಲಿಂಗ ಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಒಂದೆಡೆ ಸಮಾಜದ ಹದಗೆಡುತ್ತಿರುವ ನೈತಿಕ ಮಟ್ಟಕ್ಕೆ ಕನ್ನಡಿ ತೋರಿಸುತ್ತಿದ್ದರೆ, ಇನ್ನೊಂದೆಡೆ ನೈತಿಕ, ಸಾಮಾಜಿಕ ಮತ್ತು ಜೈವಿಕ ಮಟ್ಟದಲ್ಲಿ ಅಸಂಖ್ಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಯುವ ಜನಾಂಗವು ಪಥಭ್ರಷ್ಟವಾಗುತ್ತಿದೆ. ಕುಟುಂಬಗಳು ಛಿದ್ರಗೊಳ್ಳುತ್ತಿವೆ .ಸಮಾಜದ ಸ್ಥಿತಿಗತಿಯು ಚಿಂತಾಜನಕವಾಗಿ ಬಿಟ್ಟಿದೆ. ಇಂತಹ ಪರಿಸ್ಥಿತಿ ಗಮನದಲ್ಲಿರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲಿಕ್ಕಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶದಾದ್ಯಂತ ಒಂದು ತಿಂಗಳ ಅಭಿಯಾನ ಆಯೋಜಿಸುವ ತೀರ್ಮಾನ ಕೈಗೊಂಡಿದೆ. ಸೆಪ್ಟೆಂಬರ್ 1ರಿಂದ 30ರ ವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧೇಯ ವಾಕ್ಯದಡಿ ಪ್ರಸ್ತುತ ಅಭಿಯಾನ ನಡೆಸಲಾಗುವುದು ಎಂದವರು ಹೇಳಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ತೌಹಿದ್ ಶಿಂಧೆ ಮಾತನಾಡಿ, ಈ ರಾಷ್ಟ್ರವ್ಯಾಪಿ ಅಭಿಯಾನದಡಿ ಬೀದರ್ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಉದ್ಘಾಟನಾ ಕಾರ್ಯಕ್ರ, ಪತ್ರಿಕಾ ಗೋಷ್ಟಿ, ಮಹಿಳೆಯರೊಂದಿಗೆ ಭೇಟಿ, ಸಾಮಾಜಿಕ ಕಾರ್ಯಕರ್ತರ ಭೇಟಿ, ಮೊಹಲ್ಲಾಗಳಲ್ಲಿ ಟೀ ಪಾರ್ಟಿ, ಪದವಿ ಕಾಲೇಜು, ಬ್ರಿಮ್ಸ್, ಆಲ್ ಅಮೀನ್, ಶಾಹೀನ್, ಅಕ್ಕ ಮಹಾದೇವಿ ಮತ್ತು ನಸೀರ್ಂಗ್ ಕಾಲೇಜುಗಳಲ್ಲಿ ಚರ್ಚಾಗೋಷ್ಠಿ, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಭೇಟಿ, ಕುಟುಂಬ ಸ್ನೇಹ ಮಿಲನ್, ಮಕ್ಕಳಲ್ಲಿ ಕಾರ್ಯಕ್ರಮ, ನೈತಿಕ ಮೌಲ್ಯಗಳು ವಿಷಯದ ಮೇಲೆ ಪೋಸ್ಟರ್ ತಯ್ಯಾರಿಸುವ ಸ್ಪರ್ಧೆ, ಭಾಷಣ ಸ್ಪರ್ಧೆ, ಪೆನಲ್ ಚರ್ಚೆ, ಮುಹಮ್ಮದ್ ಅತ್ಯುನ್ನತ ಚಾರಿತ್ರ್ಯವಂತ ವಿಷಯದ ಮೇಲೆ ನಿಬಂಧ ಸ್ಪರ್ಧೆ, ಪ್ರತಿನಿತ್ಯ ಡಿಜಿಟಲ್ ಪೆÇೀಸ್ಟರ್ ತಯ್ಯಾರಿಸಿ ಜನರಿಗೆ ಕಳುಹಿಸುವುದು, ಹಳ್ಳಿಗಳಿಗೆ ಭೇಟಿ ಜನಜಾಗೃತಿ ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಂಘಟನೆಯ ನಗರ ಘಟಕದ ಅಧ್ಯಕ್ಷೆ ಸೈಯ್ಯದಾ ಉಮ್ಮ ಹಬೀಬಾ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.