ಹಿರಿಯೂರು : ಶಿಕ್ಷಕರ ದಿನಾಚರಣೆ ಭವ್ಯ ಮೆರವಣಿಗೆ
ಸಂಜೆವಾಣಿ ವಾರ್ತೆ
ಹಿರಿಯೂರು ಸೆ. 5 – ಇಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯೂರಿನಲ್ಲಿ ಭವ್ಯ ಮೆರವಣಿಗೆ ನಡೆಯಿತು.  ನಗರದ ಬಿಇಓ ಕಚೇರಿ ಬಳಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಯವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ನೆಹರು ವೃತ್ತ ಗಾಂಧಿ ವೃತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುಭವನದ ವರೆಗೆ ಸಾಗಿ ಬಂತುದಾರಿ ಯುದ್ದಕ್ಕೂ ಶಿಕ್ಷಕ ವೃಂದದವರು ಕೋಲಾಟ ಆಡುವ ಮೂಲಕ ಮನರಂಜನೆ ನೀಡಿದರು