ಪ್ರಮಾಣಪತ್ರ ವಿತರಣೆ
ಲಕ್ಷ್ಮೇಶ್ವರ,ಸೆ5: ತಾಲೂಕಿನ ಗೋನಾಳ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆದೇಶದಂತೆ ಮೊದಲ ಜನನ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ರಾಮಗಿರಿ ಫಲಾನುಭವಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಮೊದಲು ಜನಸಾಮಾನ್ಯರು ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿ ಪುರಸಭೆ, ಮತ್ತಿತರ ಕಡೆ ಇವುಗಳನ್ನು ಪಡೆಯಲು ಎಡ ತಾಕ ಬೇಕಾಗಿತ್ತು ಇದನ್ನು ಮನಗಂಡ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲು ಆದೇಶ ಮಾಡಿದ ಹಿನ್ನೆಲೆಯಲ್ಲಿ ಈಗ ಗ್ರಾಮ ಪಂಚಾಯಿತಿಯಲ್ಲಿಯೇ ಇವು ಲಭ್ಯವಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಿರ್ಮಲಾ ಚಂದ್ರಶೇಖರ ತಳವಾರ್ ಮಂಜನ ಗೌಡ ಕೆಂಚನಗೌಡ್ರು ಪದ್ಮರಾಜ್ ಪಾಟೀಲ ಸುಶೀಲವ್ವ ಮರಿಲಿಂಗನಗೌಡರ ಕರಿಯಪ್ಪ ಗೌಡ ಹೊಸಗೌಡ್ರ ಸುಧಾ ಮಾದರ ನಾಗರತ್ನ ಕಡಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುರುಬರ ಕಾರ್ಯದರ್ಶಿ ಪಾಟೀಲ ಶಿವರಾಜ್ ಸೊರಟೂರ ಸೇರಿದಂತೆ ಅನೇಕರಿದ್ದರು.