ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ
ಬಾಗಲಕೋಟೆ, ಸೆ5: ಈಗಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಜೊತೆಗೆ ಪಾಲಕರ ಪಾತ್ರವೂ ಕೊಡಾ ಮಹತ್ವದ್ದಾಗಿದೆ, ಅದಲ್ಲದೆ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಎಂದು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಗಿರೀಶ ಹೇಳಿದರು.
ಅವರು ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ 2024-25ನೇ ಸಾಲಿನ ಪಾಲಕರ ಸಭೆಯಲ್ಲಿ ಮಾತನಾಡಿದರು. ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಬರೀ ಶಿಕ್ಷಕರಷ್ಟೆ ಶ್ರಮಿಸದೆ ಪಾಲಕರೂ ಪರಿಶ್ರಮ ಪಡಬೇಕೆಂದು ಹೆಳಿದರು. ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಮೋಬೈಲ್ ಪೋನ್ ಬಳಕೆ ಹೆಚ್ಚಾಗಿರುವ ಕುರಿತು ಕಳವಳ ವ್ಯಕ್ತ ಪಡಿಸಿದರು. ಅದರ ಜೊತೆಗೆ ಪಾಲಕರ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಡಾ.ಎನ್.ಎಚ್.ಬೇವಿನಹಳ್ಳಿ ಪ್ರಾಚಾರ್ಯರು ವಹಿಸಿದ್ದರು.
ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿ ಎಂದು ಹೇಳುತ್ತಾ, ಮೋಬೈಲ್ ಪೋನ್ ಬಳಕೆಯ ಕುರಿತಾಗಿ ಕಳವಳ ವ್ಯಕ್ತಪಡಿಸಿದರು ಹಾಗೂ ವಿಜ್ಞಾನ ಕೋರ್ಸ ಮುಗಿದ ಮೇಲೆ ವೃತ್ತಿಪರ ಕೋರ್ಸಗಳ ಬಗ್ಗೆ ವಿವರಿಸಿದರು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿÉ ಪಾಲಕರ ಕರ್ತವ್ಯಗಳ ಕುರಿತು ಹೇಳಿದರು.
ಶ್ರೀಮತಿ ಎ.ಡಿ.ಮೋಮಿನ್ ಅವರು ವಂದಿಸಿದರೆ, ಶ್ರೀಮತಿ ಆಯ್.ಎಸ್.ಶಂಕಿನಮಠ ಹಾಗೂ ಬಿ.ಎಮ್. ಸೊನಕನಾಳ ನಿರೂಪಿಸಿದರು.