ಶಿಕ್ಷಕರ ಸ್ಥಾನ ಪವಿತ್ರವಾದದ್ದು : ಶಾಸಕರಾದ ಬಸವರಾಜು ವಿ ಶಿವಗಂಗಾ
ಸಂಜೆವಾಣಿ ವಾರ್ತೆ
ಚನ್ನಗಿರಿ.ಸೆ.೫ : ಗುರುಸ್ಥಾನಕ್ಕೆ ಮಿಗಿಲಾದದ್ದು ಯಾವುದೂ ಇಲ್ಲ, ಶಿಕ್ಷಣ ಕೊಟ್ಟ ಅನ್ನಕ್ಕೆ ದಾರಿ ಮಾಡಿದ ಗುರುವೃಂದಕ್ಕೆ ನಾವು ಚಿರವಾಗಿರಬೇಕೆಂದು ಶಾಸರಾದ ಬಸರಾಜು ವಿ ಶಿವಗಂಗಾ ತಿಳಿಸಿದರು. ಪಟ್ಟಣದ ಮೌದ್ಗಲ್ ಆಂಜನೇಯ ದೇಗುಲ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟನೆ ಮಾತನಾಡಿದ ಅವರು ಶಿಕ್ಷಕ ಕೆಲಸ ಇತರೆ ಕೆಲಸಕ್ಕೆ ಪವಿತ್ರವಾದದ್ದು ಎಂದರು. ತಂದೆ-ತಾಯಿ ಜನ್ಮ ನೀಡಿದರೆ ಶಿಕ್ಷಕರು ವಿದ್ಯೆ ಬುದ್ದಿ ನೀಡಿ ನಮಗೆ ಜೀವನಕ್ಕೆ ದಾರಿ ತೋರಿಸಿದ್ದಾರೆ ಎಂದರು. ಈ ವೇಳೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿಂದತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು