ಚುನಾವಣೆ ಸೋಲು- ಅಭಿಪ್ರಾಯ ಸಂಗ್ರಹ
ಕೋಲಾರ,ಸೆ,೫-ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಸೋತಿರುವಂತ ಕ್ಷೇತ್ರಗಳಲ್ಲಿ ಕಾರಣವೇನು ಎಂದು ತಿಳಿದು ವರದಿ ಸಲ್ಲಿಸಲು ಅಖಿಲ ಭಾರತ ಕಾಂಗ್ರೇಸ್ ಪಕ್ಷವು ಸತ್ಯ ಶೋಧನ ಸಮಿತಿಯನ್ನು ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು ಹಾಗೂ ವೀಕ್ಷಕರರಾದ ಮಧುಸೊಧನ್ ಮೀಸ್ತ್ರಿ ಅವರ ನೇತ್ರತ್ವದಲ್ಲಿ ರಚಿಸಲಾಗಿದೆ ಎಂದು ಸಮಿತಿಯ ಸದಸ್ಯ ಹಾಗೂ ಮಾಜಿ ಸಂಸದ ವಿನಯಕುಮಾರ್ ಸೊರಕ್ಕೆ ಅವರು ತಿಳಿಸಿದರು,
ನಗರದ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಪದಾಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯು ಎ.ಐ.ಸಿ.ಸಿ. ಸೂಚನೆ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ೫ ಮಂದಿಯ ತಂಡದ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಶಾಸಕ ನಾರಾಯಣಸ್ವಾಮಿ ಅವರನ್ನು ಕನ್ವಿನಿಯರ್, ಸದಸ್ಯರಾಗಿ ನರೇಂದ್ರ ಸ್ವಾಮಿ, ಶಿವಶಂಕರರೆಡ್ಡಿ , ಶಿವಲಿಂಗೇಗೌಡ,ಘೋರ್ಪಡೆ, ಧರ್ಮಸೇನಾ, ಜಿಗಣಿ, ಯಶವಂತಪುರ ಶಾಸಕರು ಭಾಗವಹಿಸಿದ್ದಾರೆ ಎಂದರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ರಾಜಕೀಯ ಪಕ್ಷದಲ್ಲಿ ಎಲ್ಲರೊಂದಿಗೆ ಸ್ವಾಭಿಕವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಬೆಂಗಳೂರಿನ ೪
ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ೨೦ ರಿಂದ ೩೦ ಸಾವಿರದ ಮತಗಳ ವ್ಯತ್ಯಾಸ ಕಂಡು ಬಂದಿತ್ತು. ಇದನ್ನು ಯಾರು ಸರಿಪಡೆಸ ಬೇಕು ಅದನ್ನು ನಾವೇ ಸರಿ ಪಡೆಸಬೇಕಲ್ಲವೇ ಹಾಗಾಗಿ ಚುನಾವಣೆಯಲ್ಲಿ ಸೋಲನ್ನಾಪ್ಪಲು ನಿಖರವಾದ ಕಾರಣಗಳನ್ನು ಮುಖಂಡರು ಪದಾಧಿಕಾರಿಗಳ ಅಭಿಪಾಯಗಳಿಂದ ಅರಿತು ಅವುಗಳನ್ನು ಸರಿಪಡೆಸಿ ಕೊಂಡು ಮುಂದಿನ ಚುನಾವಣೆಯಲ್ಲಿ ಯಶಸ್ವಿಯಾಗುವುದೆ ನಮ್ಮ ಸತ್ಯ ಶೋಧನ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಸಮಿತಿಯ ಸದಸ್ಯ ಧರ್ಮಸೇನಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಲ್.ಎ. ಮಂಜುನಾಥ್, ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೇಸ್ ಪ್ರಸಾದ್ ಬಾಬು, ಉದಯ್ ಶಂಕರ್, ಎಸ್.ಸಿ. ಘಟಕದ ಅಧ್ಯಕ್ಷ ಜಯದೇವ್ ಹಿಂದುಳಿದ ವರ್ಗ ಘಟಕದ ಅದ್ಯಕ್ಷ ಮಂಜುನಾಥ್ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ರತ್ನಮ್, ಖಾದ್ರಿಪುರಬಾಬು, ರೈತಮೋರ್ಚಾ ನಾಗರಾಜ್, ರಾಮಯ್ಯ, ಮುಂತಾದವರು ಇದ್ದರು.